Monday, April 21, 2025

Latest Posts

ಉತ್ತರ ಕೊಡಲು ನಮಗೂ ಬರುತ್ತದೆ, ಆದರೆ ಶಾಂತಿ ಕಾಪಾಡಬೇಕು: ಡಿಕೆಶಿ

- Advertisement -

Vijayapura news:

ಸಾವರ್ಕರ್ ಫೋಟೋ ವಿವಾದ ಇನ್ನೂ ಬೂದಿ ಮುಚ್ಚಿದ ಕೆಂಡಂದಂತಿದೆ.ಇದೀಗ ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ಕಚೇರಿಗೆ ಸಾವರ್ಕರ್ಭಾವಚಿತ್ರ ಅಂಟಿಸಿ ದೊಡ್ಡ ಹೈಡ್ರಾಮವೇ ನಡೆದಿದೆ.ಈ ವಿಚಾರವಾಗಿ ಡಿ.ಕೆ ಶಿವಕುಮಾರ್ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಲನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ರಾತ್ರೋರಾತ್ರಿ ಸಾವರ್ಕರ್ ಅವರ ಹತ್ತಾರು ಭಾವಚಿತ್ರಗಳನ್ನು ಅಂಟಿಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತರ ಕೊಡಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡಬೇಕು. ನಮ್ಮ ಕಾರ್ಯಕರ್ತರು ಮಲಗಿಲ್ಲ ಎಚ್ಚರನೇ ಇದ್ದಾರೆ. ಇದಕ್ಕೆ ಉತ್ತರ ಕೊಡಲು ನಮಗೂ ಬರುತ್ತದೆ. ಆದರೆ ಶಾಂತಿ ಕಾಪಾಡಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಕಿಡಿಕಾರಿದ್ದಾರೆ.

 

ಸಿದ್ಧರಾಮಯ್ಯ ವಿರುದ್ಧ ಗುಡುಗಿದ ಬಿ.ವೈ ವಿಜಯೇಂದ್ರ

ಮಾಂಸ ಸೇವನೆ ಚರ್ಚೆಯ ವಿಷಯವೇ ಅಲ್ಲ: ಮುತಾಲಿಕ್

ಸಿದ್ದರಾಮಯ್ಯ ಆಹಾರ ಪದ್ಧತಿ ಹೇಳಿಕೆಗೆ ಎಚ್.ಡಿ.ಕೆ ಗರಂ

- Advertisement -

Latest Posts

Don't Miss