ಕಟ್ಟಡ ಕಾರ್ಮಿಕರಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

www.karnatakatv.net: ಹೊಸಪೇಟೆ: ವಿಜಯನಗರ: ಕಟ್ಟಡ ಕಾರ್ಮಿಕರಿಗೆ 10, 000ರೂ ಪರಿಹಾರ ಧನ ವಿತರಿಸಬೇಕೆಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ ಕಾರಯಕರ್ತರು ಗುರುವಾರ ನಗರದ ತಹಸೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 10,000ರೂ ಹಣ ಸಂಗ್ರಹವಾಗಿದೆ. ರಾಜ್ಯದಲ್ಲಿ ಸುಮಾರು 3 ಕೋಟಿ ಜನ ಅಸಂಘಟಿತ ಕಾರ್ಮಿಕರಿದ್ದಾರೆ. ಹೀಗಿದ್ದು ಸರ್ಕಾರ ಒಬ್ಬ ಕಾರ್ಮಿಕನಿಗೆ 3,000ರೂ ಘೋಷಿಸಿರುವುದು ಎಷ್ಟು ಸರಿ. ಪ್ರತೀ ಕಾರ್ಮಿಕನಿಗೆ ತಲಾ 10,000ರೂ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯೆಡಿಯೂರಪ್ಪ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರರಿಗೆ ನೀಡಿ ಒತ್ತಾಯಿಸಿದರು.

About The Author