Tuesday, July 1, 2025

Latest Posts

ಚಾಮುಂಡಿ ಬೆಟ್ಟಕ್ಕೆ “ವಿಕ್ರಾಂತ್ ರೋಣ” ಭೇಟಿ..!

- Advertisement -

ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗಿ ಇವತ್ತಿಗೆ 8ನೇ ದಿನಕ್ಕೆ ಕಾಲಿಟ್ಟಿದೆ. ದಿನೇ ದಿನೇ ರೋಣನಿಗೆ ಕ್ರೇಜ್ ಹೆಚ್ಚಾಗ್ತಿದ್ದು, ಇವತ್ತಿಗೂ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ಫ್ಯಾಂಟಮ್ ಲೋಕಕ್ಕೆ ಎಂಟ್ರಿ ಕೊಟ್ಟು ರೋಣನನ್ನ ೩ಡಿ ಯಲ್ಲಿ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಹೀಗಾಗಿ ಮೂಲಗಳ ಪ್ರಕಾರ ವಿಕ್ರಾಂತ್ ರೋಣ ಬಾಕ್ಸಾಫೀಸ್‌ನಲ್ಲಿ ಶತಕೋಟಿಯನ್ನ ಗಳಿಸಿದೆ ಎಂಬ ಮಾಹಿತಿಯಿದೆ. ಕರ್ನಾಟಕದ ಜೊತೆಗೆ ಆಂಧ್ರ, ತೆಲಂಗಾಣ ಹಾಗೂ ಮುಂಬೈನಲ್ಲಿ ಹೆಚ್ಚು ಕಲೆಕ್ಷನ್ ಆಗ್ತಿದ್ದು, ವಿಕ್ರಾಂತ್ ರೋಣ ಸಿನಿಮಾವನ್ನ ಸಿಕ್ಕಾಪಟ್ಟೆ ಇಷ್ಟ ಪಡ್ತಿದ್ದಾರೆ. ಸದ್ಯದ ಅಪ್ಡೇಟ್ ಏನಪ್ಪಾ ಅಂದ್ರೆ ವಿಕ್ರಾಂತ್ ರೋಣ ಸಕ್ಸಸ್ ಹಿನ್ನೆಲೆ ಕಿಚ್ಚ ಸುದೀಪ್ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ.

ಪ್ರತೀ ಬಾರಿ ತಮ್ಮ ಸಿನಿಮಾ ಬಿಡುಗಡೆಯಾದಾಗಲೆಲ್ಲ ಕಿಚ್ಚ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಬರುತ್ತಾರೆ. ಅದರಂತೆಯೇ ವಿಕ್ರಾಂತ್ ರೋಣ ಯಶಸ್ಸಿನ ಹಿನ್ನೆಲೆ ಈ ಬಾರಿಯೂ ಬಾದ್‌ಶಾ ಅಮ್ಮನ ದರ್ಶನ ಮಾಡಿ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳ ಕಿಚ್ಚನ ಭಾವಚಿತ್ರದ ಧ್ವಜ ಹಿಡಿದು ಕಿಚ್ಚನಿಗೆ ಜೈಕಾರ ಹಾಕಿದ್ದಾರೆ.

ಸೆಲ್ಫಿ ತೆಗೆದುಳ್ಳಲು, ಮಾತನಾಡಿಸಲು ಮುಗಿಬಿದ್ದಿದ್ದು, ಅಭಿಮಾನಿಗಳ ಪ್ರೀತಿಗೂ ಕಿಚ್ಚ ಕೊಂಚ ಸಮಯ ಕೊಟ್ಟು ಸೆಲ್ಫಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ವಿಕ್ರಾಂತ್ ರೋಣನ ಅಬ್ಬರಕ್ಕೆ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಿದ್ದು, 100 ದಿನಕ್ಕೂ ಹೆಚ್ಚು ದಿನ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಓಡಲಿ ಅನ್ನೋದೆ ಎಲ್ಲರ ಆಶಯ.

- Advertisement -

Latest Posts

Don't Miss