ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಗ್ರಾಮ ಲೆಕ್ಕಿಗ ಐದು ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ.
ಜಮೀನು ಮ್ಯುಟೇಷನ್ಗಾಗಿ ಫೋನ್ ಪೇ ಮೂಲಕ ಲಂಚ ಪಡೆಯುತಿದ್ದ ಗ್ರಾಮ ಲೆಕ್ಕಿಗನನ್ನ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅಫಜಲಪುರ ತಾಲೂಕಿನ ಹಿರೇಜೇವರ್ಗಿ ಗ್ರಾಮ ಲೆಕ್ಕಿಗ ಮಹಾಬಲೇಶ್ವರ ಕುಂಬಾರ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಐದು ಸಾವಿರ ರೂ. ಫೋನ್ ಪೇ ಮೂಲಕ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಶರಣಬಸಪ್ಪ ಎನ್ನುವರಿಂದ ಜಮೀನು ಮ್ಯುಟೇಷನ್ಗಾಗಿ ಲಂಚದ ಬೇಡಿಕೆ ಇಟ್ಟು, ಅಫಜಲಪುರ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಐದು ಸಾವಿರ ರೂಪಾಯಿ ಹಣ ಪಡೆಯುವಾಗ ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೆಲಸವಾದ ನಂತರ ಇನ್ನಷ್ಟು ಹಣ ನೀಡುವಂತೆ ಹೇಳಿದ್ದನಂತೆ. ಸದ್ಯ ಎಸಿಬಿ ಅಧಿಕಾರಿಗಳು ಗ್ರಾಮ ಲೆಕ್ಕಿಗ ಮಹಾಬಲೇಶ್ವರ ಕುಂಬಾರನನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.