ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಮಂಗನ ಕಾಯಿಲೆ ಉಲ್ಬಣಿಸುತ್ತಿದೆ. ಈ ಮಂಗನ ಕಾಯಿಲೆಯಿಂದಾಗಿ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಬಲಿಯಾಗಿದ್ದಾರೆ.
ಹೌದು.. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ಸದಸ್ಯ ಕರುಮನೆ ರಾಮಸ್ವಾಮಿ (57) ಎಂಬುವರಿಗೆ ಮಂಗನ ಕಾಯಿಲೆ ಲಕ್ಷಣಗಳು ಇತ್ತೀಚಿಗೆ ಕಾಣಿಸಿಕೊಂಡಿತ್ತು.
ಏಪ್ರಿಲ್ 24ರಂದು ರಕ್ಷ ಪರೀಕ್ಷೆ ಮಾಡಿಸಿದಂತ ಸಂದರ್ಭದಲ್ಲಿ ಅವರಿಗೆ ಮಂಗನಕಾಯಿಲೆ ತಗುಲಿರೋದು ದೃಢಪಟ್ಟಿತ್ತು. ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಕೂಡ ಪಡೆಯುತ್ತಿದ್ದರು. ಆದ್ರೇ.. ಸೋಮವಾರ ತೀವ್ರ ಜ್ವರದಿಂದಾಗಿ, ಅಂಗಾಂಗ ವೈಫಲ್ಯದೊಂದಿಗೆ ಮಂಗಳವಾರ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಸಾಗರ ವೈದ್ಯಾಧಿಕಾರಿ ಡಾ.ಮೋಹನ್ ಅವರು, ಅರಳಗೋಡು ಗ್ರಾಮ ಪಂಚಾಯ್ತಿ ಸದಸ್ಯ ಕರುಮನೆ ರಾಮಸ್ವಾಮಿ(57) ಅವರಿಗೆ ಪರೀಕ್ಷೆಯಲ್ಲಿ ಮಂಗನ ಕಾಯಿಲೆ ತಗುಲಿದ್ದು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಅವರು ಮಂಗಳವಾರ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.




