Friday, April 18, 2025

Latest Posts

ಗೌರಿ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಿದ ಹಳ್ಳಿ ಜನರು…!

- Advertisement -

www.karnatakatv.net :ಗುಂಡ್ಲುಪೇಟೆ : ಸರ್ಕಾರದ ಮಾರ್ಗಸೂಚಿ ಅನ್ವಯ ನಿಯಮವನ್ನು ಪಾಲಿಸುವಂತೆ ಬಾರಿ ಗಣೇಶ ಹಬ್ಬಕ್ಕೆ ಕರಿನೆರಳಿನ ಛಾಯೆ ಎಲ್ಲೆಡೆ ಮೂಡಿದೆ. ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದ ಜನರು ಪ್ರತಿವರ್ಷ ಅದ್ದೂರಿಯಾದ ಗಣೇಶ ಉತ್ಸವವನ್ನು ಆಚರಿಸುತ್ತಿದ್ದರು ಆದರೆ ಈ ಬಾರಿಯ ಕೊರೋನಾದ ಹಿನ್ನೆಲೆಯಲ್ಲಿ ಬಹಳ ಸರಳವಾಗಿ ತಮ್ಮ ಗ್ರಾಮದಲ್ಲಿ ಆಚರಿಸಿದರು.  

ಸರ್ಕಾರದ ಮಾರ್ಗಸೂಚಿಯನ್ವಯ ಬಹಳ ಸರಳವಾಗಿ ಗ್ರಾಮದಲ್ಲಿ ಆಚರಣೆ ನಡೆಸಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡರಾದ ಮಾದು ಮತ್ತು  ಮಹೇಶ್ ರವರು ಪಕ್ಕದ ಕೇರಳ ರಾಜ್ಯದಲ್ಲಿ ಕೊರೊನ ಮತ್ತು ನಿಪಾ ವೈರಸ್ ಹಿನ್ನೆಲೆಯಲ್ಲಿ ನಮ್ಮ ಗ್ರಾಮದ ಸರಳವಾಗಿ ಆಚರಣೆ ಮಾಡುತ್ತಿದ್ದೇವೆ .ಪ್ರತಿ ವರ್ಷವು ಕೂಡ ಅನ್ನ ಸಂತರ್ಪಣೆ  ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು .ಈ ಬಾರಿ ಸರಳ ಪ್ರಸಾದ್ ವಿನಿಯೋಗ   ಸೀಮಿತವಾಗಿದೆ ಎಂದು ತಿಳಿಸಿದರು.

ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

- Advertisement -

Latest Posts

Don't Miss