www.karnatakatv.net: ಲಕ್ಷ್ಮೇಶ್ವರ: ಮಳೆ ಬಂದಾಗ ಗುಂಡಿಯಲ್ಲಿ ನೀರು ನಿಂತು ಜನರಿಗೆ ಓಡಾಡಲು ತೊಂದರೆಯಾಗಿದ್ದು, ಗ್ರಾಮಸ್ಥರು ಗುಂಡಿಗಳನ್ನು ಮುಚ್ಚಲು ಅಗ್ರಹಿಸಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಿಂದ ಶಿಗ್ಲಿವರೆಗಿನ ರಸ್ತೆಯೂ ಸಂಪೂರ್ಣ ಹಾಳಾಗಿ ದೊಡ್ಡ ದೊಡ್ಡ ಗುಂಡಿಗಳಾಗಿ ಮಾರ್ಪಟಿವೆ. ಈ ರಸ್ತೆಯಲ್ಲಿ ಗೋನಾಳ ಗ್ರಾಮದಿಂದ ಶಿಗ್ಲಿ ಗ್ರಾಮಕ್ಕೆ ರೈತರು ಜಾನುವಾರುಗಳನ್ನು ಚಿಕಿತ್ಸೆ ಕೊಡಿಸಲು ಹೋಗುತ್ತಾರೆ ಇನ್ನೂ ಈ ರಸ್ತೆಯೂ ರೈತ ಸಂಪರ್ಕ ರಸ್ತೆಯಾಗಿದ್ದರಿಂದ ರೈತರಿಗೆ ಚಕ್ಕಡಿ ತೆಗೆದುಕೊಂಡು ಹೋಗಲು ಆಗುತ್ತಿಲ್ಲ ಅಷ್ಟೊಂದು ಹದಗೆಟ್ಟ ಹೋಗಿದೆ. ಈ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನಾದರು ಮುಚ್ಚಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಸ್ತೆಯ ಮೇಲೆ ಡಾಂಬರೀಕರಣ ಇಲ್ಲದಂತೆ ಎಲ್ಲಾ ಡಾಂಬರ ಕಿತ್ತುಕೊಂಡು ಹೋಗಿದ್ದು, ರಸ್ತೆ ಸಂಪೂರ್ಣ ಗುಂಡಿಗಳಾಗಿಯೇ ಮಾರ್ಪಟಿದೆ. ಈ ರಸ್ತೆಯ ಮೇಲೆ ಕೆಲವೊಂದು ಅಪಘಾತ ಆಗಿರುವ ಘಟನೆಗಳು ನಡೆದು ಹೋಗಿವೆ. ಈ ರಸ್ತೆಯ ಮೇಲೆ ವಾಹನ ಸವಾರರು ಸ್ವಲ್ಪ ಆಯಾ ತಪ್ಪಿದರೆ ಸಾಕು ಬಿಳೋದು ಗ್ಯಾರಂಟಿ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ರಸ್ತೆಯ ಮೇಲೆ ತಾತ್ಕಾಲಿಕವಾಗಿ ಮಣ್ಣು ಹಾಕಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಟಿವಿ- ಹುಬ್ಬಳ್ಳಿ