www.karnatakatv.net :ರಾಯಚೂರು- ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಮಳೆರಾಯ ತನ್ನ ಆರ್ಭಟ ಮುಂದುವರೆಸಿದ್ದಾನೆ. ರಾಯಚೂರಿನಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ.
ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ತಡಕಲ್ ಗ್ರಾಮದ ಸೇತುವೆಯೊಂದು ಮಳೆಯಿಂದಾಗಿ ಸಂಪೂರ್ಣ ನಾಶವಾಗಿದೆ. ಮಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿರೋ ಸೇತುವೆ ಮೇಲೆ ಗ್ರಾಮಸ್ಥರು ಓಡಾಟ ನಡೆಸ್ತಿದ್ದಾರೆ. ಕೊಚ್ಚಿಹೋಗಿರೋ ಸೇತುವೆ ಮೇಲೆ ರಭಸವಾಗಿ ಹರಿಯುತ್ತಿರೋ ನೀರಿನ ಮಧ್ಯೆಯೇ ಗ್ರಾಮಸ್ಥರು ಜೀವ ಕೈಲಿಡಿದು ಸಂಚರಿಸುತ್ತಿದ್ದಾರೆ. ಒಂದು ವೇಳೆ ಆಯತಪ್ಪಿದ್ರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಅಪಾಯ ಇದೆ. ಆದ್ರೆ ಬೇರೆ ದಾರಿಯಿಲ್ಲದೆ ಗ್ರಾಮಸ್ಥರು ಇದೇ ಸೇತುವೆಯನ್ನ ಅವಲಂಬಿಸಿದ್ದಾರೆ. ಇನ್ನು ಹಾಳಾಗಿರೋ ಸೇತುವೆಯನ್ನ ದುರಸ್ಥಿಗೊಳಿಸಿ ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು