ಧಾರವಾಡ : ರಾಜಕೀಯದಲ್ಲಿ ಅಣ್ಣ ತಮ್ಮಂದಿರೇ ಎದುರಾಳಿಗಳು ಅದರಂತೆ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಮಾತಿನ ರಣರಂಗ ಶುರುವಾಗಿದೆ. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಇಬ್ಬರು ರಾಜಕೀಯ ನಾಯಕರಾದ ಪಾಳೆಗಾರ ಮತ್ತು ಜಮೀನ್ದಾರರ ನಡುವೆ ಟಾಕ್ ವಾರ್ ಶುರುವಾಗಿದೆ.
ಕಾಂಗ್ರೆಸ್ನ ಹಾಲಿ ಶಾಸಕರಾದ ವಿನಯ್ ಕುಲಕರ್ಣಿಯವರು ಬಿಜೆಪಿಯ ಅಧಿಕಾರವಧಿಯಲ್ಲಿ ಜಿಲ್ಲೆಯಲ್ಲಿ ನಡೆದಿರುವ 65 ಕಾಮಗಾರಿಗಳ ಹಗರಣವಾಗಿದ್ದು ಅವುಗಳ ಕುರಿತು ಅಧಿಕಾರಿಗಳು ತನಿಖೆ ನಡೆಸುವಂತೆ ಶಾಸಕರು ಸೂಚನೆ ನೀಡಿದ್ದಾರೆ.
ಕಾಮಗಾರಿಗಳ ಅನುಷ್ಠಾನದಲ್ಲಿ ಹಗರಣವಾಗಿದ್ದರೆ ತನಿಖೆ ನಡೆಸಿ.ಆದರೆ ಈಗ ರೈತರ ಸಂಕಷ್ಟಗಳಿಗೆ ಸ್ಪಂದಿಸುವವರಿಲ್ಲ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಆಗಿಲ್ಲ ಧಾರವಾಡ ಜಿಲ್ಲೆ ಜಿಪಿಎ ಆಗಿದೆ. ಗುತ್ತಿಗೆದಾರರ ಬಿಲ್ ಪೆಂಡಿಂಗ್ ಇವೆ ಎಂದು ಬಿಜೆಪಿಯ ಮಾಜಿ ಶಾಸಕರಾದ ಅಮೃತ ದೇಸಾಯಿ ಹೇಳಿದರು
ಇದಕ್ಕೆ ಉತ್ತರವಾಗಿ ಶಾಸಕ ವಿನಯ್ ಕುಲಕರ್ಣಿಯವರು ಜಿಲ್ಲಾಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಜಿಲ್ಲೆಗೆ ಹಂತಹಂತವಾಗಿ ಅನುದಾನ ಬರುತ್ತಿದೆ. ನಾನು ಹೊರಗೆ ಇದ್ದರೂ ಕ್ಷೇತ್ರದ ಅಭಿವೃದ್ದಿಗೆ ಯಾವುದೆ ಕಾರಣಕ್ಕೂ ಕೊರತೆಯಾಗಿಲ್ಲ ಜಿಲ್ಲೆಯಲ್ಲಿ 65 ಕಾಮಗಾರಿಗಳಲ್ಲಿ ಹಗರಣ ನಡೆದಿದೆ. ಈ ಕುರಿತು ತನಿಖೆ ನಡೆಸುವುದಾಗಿ ಶಾಸಕ ವಿನಯ್ ಕುಲಕರ್ಣಿ ತಿಳಿಸಿದರು.
Anna Bhagya: ಅಕ್ಕಿ ಕೊರತೆ ನೀಗಿಸಲು ಫಲಾನುಭವಿಗಳ ಖಾತೆಗೆ ಹಣ ಜಮ. ಆದರೆ ಕೆಲವರಿಗೆ ವಂಚನೆ.!