Wednesday, November 29, 2023

Latest Posts

ಬಾಕ್ಸರ್ ಕಸರತ್ತು ತೋರಿಸೋದಿಕ್ಕೆ ವಿನಯ್ ರೆಡಿ.! ಸದ್ದಿಲ್ಲದೆ ನೇರವೇರಿತು ಸಿನಿಮಾ‌ ಮುಹೂರ್ತ.!

- Advertisement -

ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ಕರಿ ಕೋಟು ತೊಟ್ಟು ವಾದ ಮಾಡಿದ್ದ ವಿನಯ್ ರಾಜ್ ಕುಮಾರ್ ಈಗ ಬಾಕ್ಸರ್ ಅವತಾರದಲ್ಲಿ ಮಿಂಚ್ತಿರೋದು ಗೊತ್ತೇ ಇದೆ. ಈಗಾಗ್ಲೇ ಬಾಕ್ಸರ್ ರಗಡ್ ಲುಕ್ ನೋಡಿ ಸಿನಿರಸಿಕರು ಹುಬ್ಬೇರಿಸುವಂತೆ ಮಾಡಿದ್ದ ಚಿತ್ರತಂಡ, ಇದೀಗ ಸದ್ದಿಲ್ಲದೇ ಸಿನಿಮಾ ಮುಹೂರ್ತ ನೇರವೇರಿಸಿದೆ.

ಸಿನಿಮಾಕ್ಕೆ‌ ಕ್ಲಾಪ್ ಮಾಡಿದ ರಕ್ಷಿತ್ ಶೆಟ್ಟಿ

ಅಂದಹಾಗೇ ಸಿನಿಮಾಕ್ಕೆ‌ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಹೀಗಾಗಿ TEN ಅಂತಾ ವರ್ಕಿಂಗ್ ಟೈಟಲ್ ಇಡಲಾಗಿದೆ. ಈ ಮೂಹರ್ತ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ ಭಾಗವಹಿಸಿ ಸಿನಿಮಾ ಟೀಂಗೆ ಶುಭಾಷಯ ಕೋರಿದ್ರು. ಇನ್ನು, ಚಿತ್ರದಲ್ಲಿ ವಿನಯ್ ಗೆ ಜೋಡಿಯಾಗಿ ಅನುಷಾ ರಂಗನಾಥ್ ಬಣ್ಣ ಹಚ್ಚಲಿದ್ದಾರೆ. ಸಿನಿಮಾಟೋಗ್ರಾಫರ್ ಕರ್ಮ ಚಾವ್ಲಾ ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ. ಇನ್ನು ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಲಿದ್ದಾರೆ.

ವಿನಯ್ ಬಾಕ್ಸಿಂಗ್ ಲುಕ್
- Advertisement -

Latest Posts

Don't Miss