- Advertisement -
Sports News: ಒಲಂಪಿಕ್ಸ್‌ನ ಕುಸ್ತಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಫೈನಲ್ ತಲುಪಿದ್ದ ವಿನೀಶ್ ಫೋಗಟ್, 100 ಗ್ರಾಂ ಹೆಚ್ಚಿದ್ದ ಕಾರಣಕ್ಕೆ, ಪಂದ್ಯದಿಂದಲೇ ಅಮಾನತಾಗಿದ್ದಾರೆ.
ಹಾಗಾಗಿ ವಿನೀಶ್ ರಾತ್ರಿಯಿಡೀ ದೇಹದ ತೂಕ ಇಳಿಸಲು ಶ್ರಮ ಪಟ್ಟಿದ್ದು, ದೇಹದಲ್ಲಿ ನಿರ್ಜಲೀಕರಣ ಉಂಟಾಗಿ, ಅನಾರೋಗ್ಯ ಉಂಟಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿನ್ನೆ ರಾತ್ರಿ ವಿನೀಶ್ 2 ಕೆಜಿ ಹೆಚ್ಚಾಗಿದ್ದರು. ಆದರೆ, ಬೆಳಗ್ಗಿನ ವರ್ಕೌಟ್ ಬಳಿಕ ಒಂದೂವರೆ ಕೆಜಿ ತೂಕ ಇಳಿಸಿದ್ದಾರೆ. ಆದರೆ 100 ಗ್ರಾಂ ತೂಕ ಹೆಚ್ಚಾದ ಕಾರಣಕ್ಕೆ, ವಿನೀಶ್‌ರನ್ನು ಫೈನಲ್ ಪಂದ್ಯದಿಂದ ಅಮಾನತು ಮಾಡಲಾಗಿದೆ. ಇಷ್ಟು ಕಷ್ಟ ಪಟ್ಟು ಫೈನಲ್ ತಲುಪಿದರೂ, ಚಿನ್ನ ಅಥವಾ ಬೆಳ್ಳಿ ವಿನೀಶ್ ಪಾಲಿಗೆ ದೂರ ಉಳಿದಿದೆ. ಇವರೊಂದಿಗೆ ಫೈನಲ್‌ನಲ್ಲಿ ಸೆಣೆಸಬೇಕಿದ್ದ ಅಮೆರಿಕದ ಆಟಗಾರ್ತಿಗೆ ಚಿನ್ನದ ಪದಕ ಸಿಗಲಿದೆ. ಆದರೆ ವಿನೀಶ್‌ಗೆ ಮಾತ್ರ ಯಾವುದೇ ಪದಕ ಸಿಗುವುದಿಲ್ಲ.
- Advertisement -