ನಾಡಹಬ್ಬ ದಸರಾ ಆಚರಣೆ ವೇಳೆ ತಮ್ಮ ಮೊಮ್ಮಗ ಕಾಣಿಸಿಕೊಂಡ ವಿಚಾರವಾಗಿ, ಪ್ರೋಟೋಕಾಲ್ ಉಲ್ಲಂಘನೆ ಆರೋಪಗಳನ್ನು ಸಚಿವ ಮಹದೇವಪ್ಪ ತಳ್ಳಿ ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರೇಡ್ ವೇಳೆ, ಮಹದೇವಪ್ಪ ಮೊಮ್ಮಗ ಕಾಣಿಸಿಕೊಂಡ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರಿನಲ್ಲಿ ಹೆಚ್.ಸಿ ಮಹದೇವಪ್ಪ, ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳು ದಸರಾ ದಿನ ಉದ್ಘಾಟಕರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದು ಸರ್ಕಾರಿ ಕಾರ್ಯಕ್ರಮ. ನಂತರ ದಸರಾ 11ನೇ ದಿನದ ಆಚರಣೆಯಲ್ಲಿ ನಂದಿ ಕಂಬಕ್ಕೆ ಪೂಜೆ ಮಾಡ್ತೀವಿ. ಬಳಿಕ ಅಲ್ಲಿಂದ ವಾಪಸ್ ಬಂದು ನಮ್ಮ ಸ್ಥಳದಲ್ಲಿ ಕುಳಿತುಕೊಳ್ಳುತ್ತೇವೆ.
ಇದರಲ್ಲಿ ಪ್ರೋಟೋಕಾಲ್ ಇಲ್ಲ. ಸೆಲ್ಯೂಟ್ ಸ್ವೀಕರಿಸುವುದಿಲ್ಲ. ಯಾರು ಹೆಂಗೆ ಬೇಕಾದ್ರೂ ಹೋಗಬಹುದು. ಆ ಹುಡುಗ ಬಂದಿದ್ದಕ್ಕೆ ಯಾವುದೇ ಪ್ರೋಟೋಕಾಲ್ ಇಲ್ಲ. ಸೆಲ್ಯೂಟೂ ಇಲ್ಲ. ಅಲ್ಲಿ ಯಾವುದೇ ಉಲ್ಲಂಘನೆಯೂ ಆಗಿಲ್ಲ. ಆಗುವುದಕ್ಕೆ ಸಾಧ್ಯವೂ ಇಲ್ಲ ಅಂತಾ ಮಹದೇವಪ್ಪ ಹೇಳಿದ್ರು.
ವಿಜಯದಶಮಿ ಮೆರವಣಿಗೆಯಲ್ಲಿ ಕಪ್ಪು ಸನ್ ಗ್ಲಾಸ್ ಧರಿಸಿದ ಮಹದೇವಪ್ಪ ಮೊಮ್ಮಗ, ತೆರೆದ ವಾಹನದಲ್ಲಿ ರಾಜ್ಯದ ಉನ್ನತ ನಾಯಕರ ಮಧ್ಯೆ ನಿಂತುಕೊಂಡಿದ್ದ. ಸರ್ಕಾರಿ ಕಾರ್ಯಕ್ರಮದಲ್ಲಿ ಮಹದೇವಪ್ಪ ಮೊಮ್ಮಗನ ಉಪಸ್ಥಿತಿ, ವಿವಾದ ಭುಗಿಲೇಳುವಂತೆ ಮಾಡಿದೆ.