Friday, December 5, 2025

Latest Posts

ಅಪ್ರಾಪ್ತರಿಗೆ ದ್ವಿಚಕ್ರ ವಾಹನ ನೀಡಿ ಸಂಚಾರ ನಿಯಮ ಉಲ್ಲಂಘನೆ: 75 ಸಾವಿರ ದಂಡ ವಿಧಿಸಿದ ಕೋರ್ಟ್

- Advertisement -

Hubli News: ಹುಬ್ಬಳ್ಳಿ : ಅಪ್ರಾಪ್ತರಿಗೆ ದ್ವಿಚಕ್ರ ವಾಹನ ನೀಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿಸಲು ಪರೋಕ್ಷ ಸಹಕಾರ ನೀಡಿದ ಮೂವರು ಪಾಲಕರಿಗೆ ಇಲ್ಲಿನ ಒಂದನೇ ಜೆಎಂಎಫ್‌ಸಿ ಕೋರ್ಟ್ ದಂಡ ವಿಧಿಸಿ, 75 ಸಾವಿರ ಪಾವತಿಸಿಕೊಂಡಿದೆ. ಗೌಳಿಗಲ್ಲಿಯ ಅನಿಲ ಕೋಳೇಕರ, ಕಮರಿಪೇಟೆಯ ಸುನೀಲ ಮೇತ್ರಾಣಿ ಮತ್ತು ಪಡದಯ್ಯನ ಹಕ್ಕಲದ ಅಶ್ವಿನಿ ಕಲಾ ಅವರಿಂದ ತಲಾ 25 ಸಾವಿರ ದಂಡ ಕಟ್ಟಿಸಿಕೊಳ್ಳಲಾಗಿದೆ.

ಕೆಲ ದಿನಗಳ ಹಿಂದೆ ದಕ್ಷಿಣ ಸಂಚಾರ ಠಾಣೆ ಪೊಲೀಸರು ಕರ್ತವ್ಯದಲ್ಲಿದ್ದಾಗ, ದ್ವಿಚಕ್ರ ವಾಹನ ಚಲಾಯಿಸುತ್ತಿದ್ದವರ ಪರಿಶೀಲನೆ ನಡೆಸಿದ್ದರು. ಆ ವೇಳೆ ಮೂವರು ಅಪ್ರಾಪ್ತರು ವಾಹನ ಚಲಾಯಿಸುತ್ತಿರುವುದು ಕಂಡು ಬಂದಿತ್ತು. ವಾಹನ ನಂಬರ್ ಆಧರಿಸಿ ನೋಟಿಸ್ ನೀಡಲಾಗಿತ್ತು. ಇದೀಗ ಅವರು ಕೋರ್ಟ್‌ನಲ್ಲಿ ದಂಡ ಪಾವತಿಸಿದ್ದಾರೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest Posts

Don't Miss