Saturday, August 9, 2025

Latest Posts

ವಿವಿಧ ಗಣ್ಯರಿಂದ ಹೊಟ್ಟೆಪಾಡು” ಚಿತ್ರದ ಹಾಡುಗಳು ಬಿಡುಗಡೆ

- Advertisement -

ವಿವಿಧ ಗಣ್ಯರಿಂದ ಬಿಡುಗಡೆಯಾಯಿತು “ಹೊಟ್ಟೆಪಾಡು” ಚಿತ್ರದ ಹಾಡುಗಳು

ವಂದನ ಎಂಟರ್ ಪ್ರೈಸಸ್ ಲಾಂಛನದಲ್ಲಿ ಡಿ.ವಿ.ರಾಧ ಅವರು ನಿರ್ಮಿಸಿರುವ, ವಸಂತ್ ಸಂಗೀತ ನಿರ್ದೇಶನ, ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ “ಹೊಟ್ಟೆಪಾಡು” ಚಿತ್ರದ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು. ಹಿರಿಯ ನಿರ್ದೇಶಕರಾದ ಓಂ ಸಾಯಿಪ್ರಕಾಶ್, ಬಾಲಾಜಿ ಸಿಂಗ್, ಅಡಮಾರನಹಳ್ಳಿ ರಾಜಕೀಯ ಮುಖಂಡರಾದ ರಾಜಣ್ಣ ಹಾಗೂ ಸಿರಿ ಮ್ಯೂಸಿಕ್ ಸುರೇಶ್ ಚಿಕ್ಕಣ್ಣ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು. ಸಿರಿ ಮ್ಯೂಸಿಕ್ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಟ್ರೇಲರ್ ಸಹ ಬಿಡುಗಡೆಯಾಗಿದ್ದು, ಜನಮನ ಗೆದ್ದಿದೆ.

ನಾನು ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆಗಿನಿಂದಲೂ ನಾಯಕನಾಗುವ ಆಸೆ. ಆದರೆ ಆಗಿರಲಿಲ್ಲ. ಕೆಲವು ವರ್ಷ ಬೇರೆ ವ್ಯಾಪಾರ ಮಾಡುತ್ತಿದೆ. ಈಗ “ಹೊಟ್ಟೆಪಾಡು” ಚಿತ್ರ ನಿರ್ಮಾಣ ಮಾಡಿದ್ದೇವೆ. ನನ್ನ ಶ್ರೀಮತಿ ರಾಧ ಈ ಚಿತ್ರದ ನಿರ್ಮಾಪಕಿ. ನಾನೇ ಸಂಗೀತ ನಿರ್ದೇಶನ ಹಾಗೂ ನಿರ್ದೇಶನ ಮಾಡಿದ್ದೇನೆ. “ಹೊಟ್ಟೆಪಾಡು” ವಿಭಿನ್ನ ಕಥೆ ಹೊಂದಿರುವ ಸಾಹಸಮಯ ಹಾಗೂ ಸಾಂಸಾರಿಕ ಚಿತ್ರ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ. ಈ ಚಿತ್ರ ಇಲ್ಲಿಯ ತನಕ ಬರಲು ನನ್ನ ಸ್ನೇಹಿತ ಆನಂದ್ ಕಾರಣ. ನನ್ನ ತಂಡದ ಸಹಕಾರವನ್ನು ಮರೆಯುವ ಹಾಗಿಲ್ಲ. ಇಂದು ನಮ್ಮ ಸಮಾರಂಭಕ್ಕೆ ಆಗಮಿಸಿದ್ದ ಎಲ್ಲಾ ಗಣ್ಯರಿಗೆ ನನ್ನ ಧನ್ಯವಾದ ಎಂದರು ನಾಯಕ, ನಿರ್ದೇಶಕ ವಸಂತ್.

ನಿರ್ಮಾಪಕಿ ಡಿ.ವಿ.ರಾಧ, ಸಾಹಸ ನಿರ್ದೇಶಕ ಕೌರವ ವೆಂಕಟೇಶ್, ನಾಯಕಿ ಜಾಹ್ನವಿ ವಿಶ್ವನಾಥ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಹಾಗೂ ತಂತ್ರಜ್ಞರು “ಹೊಟ್ಟೆಪಾಡು” ಚಿತ್ರದ ಕುರಿತು ಮಾತನಾಡಿದರು.

ತನ್ಮಯ್ ಎಸ್ ಆನಂದಕುಮಾರ್ ಚಿತ್ರಕಥೆ, ಸಂಭಾಷಣೆ, ನೃತ್ಯ ಹಾಗೂ ಸಹಕಾರ ನಿರ್ದೇಶನವಿರುವ ಈ ಚಿತ್ರಕ್ಕೆ ರವಿ ಬೆಳಗುಂದಿ ಛಾಯಾಗ್ರಹಣ ಹಾಗೂ ಅಮಿತ್ ಜವಳಪುರ ಸಂಕಲನವಿದೆ.

ವಸಂತ್, ಜಾಹ್ನವಿ ವಿಶ್ವನಾಥ್, ವಿನಯಪ್ರಸಾದ್, ಶೋಭ್ ರಾಜ್, ಅಪೂರ್ವ, ಶೈಲೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

- Advertisement -

Latest Posts

Don't Miss