ದೇಶದ ಅತ್ಯಂತ ಕಿರಿಯ ಸಂಸದೆ ಎನಿಸಿಕೊಂಡಿರುವ ಶಾಂಭವಿ ಚೌಧರಿ ಅವರು ಪೇಪರ್ ನೋಡದೆ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ.
26 ವರ್ಷ ವರ್ಷದ ಶಾಂಭವಿ ಅವರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಾಂಭವಿ ಅವರು ಬಿಳಿ ಬಣ್ಣದ ಸೀರೆ ಧರಿಸಿ ಪೇಪರ್ ನೋಡದೆ ಸಭೆಯನ್ನು ನೋಡಿಕೊಂಡೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
समस्तीपुर (बिहार) से सांसद शांभवी चौधरी ने लोकसभा में अलग अंदाज में लिया शपथ #Samastipur #Bihar #ShambhaviChoudhary #LokSabhaOath #ViralVideo pic.twitter.com/NP5I2Krjns
— TheSootr (@TheSootr) June 24, 2024
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಬಿಹಾರದ ಸಮಸ್ತಿಪುರದಲ್ಲಿ ಸ್ಪರ್ಧಿಸಿದ್ದ ಶಾಂಭವಿ, ಕಾಂಗ್ರೆಸ್ ಅಭ್ಯರ್ಥಿ ಸನ್ನಿ ಹಜಾರಿ ಅವರನ್ನು 1,87,251 ಮತಗಳಿಂದ ಸೋಲಿಸಿದ್ದಾರೆ. ಇದ್ರೊಂದಿಗೆ ಇವರು ಸಮಸ್ತಿಪುರದ ಮೊದಲ ಮಹಿಳಾ ಸಂಸದೆ ಎನಿಸಿಕೊಂಡಿದ್ದಾರೆ. ಶಾಂಭವಿ ಚೌಧರಿ ಜೆಡಿಯು ನಾಯಕರಾದ ಅಶೋಕ್ ಚೌಧರಿ ಅವರ ಪುತ್ರಿಯಾಗಿದ್ದಾರೆ. ಅಶೋಕ್ ಅವರು ನಿತೀಶ್ ಕುಮಾರ್ ಅವರ ಕ್ಯಾಬಿನೆಟ್ನಲ್ಲಿ ಮಂತ್ರಿಯಾಗಿದ್ದಾರೆ.




