ಹಾಸನ: ರೈತರು ರಾಜ್ಯದಲ್ಲಿ ಬರಗಾಲದಿಂದ ಬೇಸತ್ತಿದ್ದಾರೆ. ರಾಜ್ಯ ಸರ್ಕಾರ ಸಬೂಬು ಹೇಳಿಕೊಂಡು ಕೂತಿದೆ. ರೈತರ ಬೆಳೆಯನ್ನು ಸಂಪೂರ್ಣ ನೆಲಸಮ ಮಾಡುವ ದೃಶ್ಯಗಳನ್ನು ಮಾಧ್ಯಮಗಳು ಇಡುತ್ತಿವೆ ರಾಜ್ಯದಲ್ಲಿ ಸರ್ಕಾರದ ಹುಡುಗಾಟಿಕೆಯಿಂದ ನೆಲ ಜಲ ರಕ್ಷಿಸಲು ವಿಫಲವಾಗಿದೆ ಬರೀ ಬಾಯಿ ಮಾತಿಗೆ ನೆಲ ಜಲ ರಕ್ಷಣೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆಯಿಂದ ಬೆಳೆ ಬೆಳೆಯಲಾಗುತ್ತಿಲ್ಲ ಸರ್ಕಾರ ಬೆಳೆಗಳನ್ನ ಬೆಳೆಯಬೇಡಿ ಎಂದು ಹೇಳಿದೆ ನಮ್ಮ ರಾಜ್ಯ ಸರ್ಕಾರದ ಮೇಲೆ ತೂಗು ಕತ್ತಿಯನ್ನ ಬೀಸಿರೋದು ಕಾಣುತ್ತಿದ್ದೇವೆ
ತಮಿಳುನಾಡಿನವರು ಬೆಳೆ ಬೆಳೆಯೋದಕ್ಕೆ 25ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಬೇಡಿಕೆ ಇಟ್ಟಿದ್ದರು ಅಲ್ಲಿನ ಅಧಿಕಾರಿಗಳು 20,25 ಅಧಿಕಾರಿಗಳು ಎಲ್ಲಾ ಮಾಹಿತಿಯೊಂದಿಗೆ ಪ್ರಾಧಿಕಾರದ ಮುಂದೆ ಹೋಗುತ್ತಾರೆ. ನಮ್ಮವರು ಮಾಹಿತಿ ಇಲ್ಲದೇ 2,3 ಅಧಿಕಾರಿಗಳು ಹೋಗುತ್ತಾರೆ ಇದು ನನಗಿರುವ ಮಾಹಿತಿ
ತಮಿಳುನಾಡಿನವರು ಸುಪ್ರೀಂಕೋರ್ಟ್ ಮುಂದೆ ಅರ್ಜಿ ಹಾಕಿದ್ದಾರೆ ಕಾವೇರಿ ಪ್ರಾಧಿಕಾರದ ಆದೇಶ ಹೊರತಾಗಿ ಕೋರ್ಟ್ ಮುಂದೆ ಹೋದರು ನಾನು ಅವತ್ತೇ ಹೇಳಿದ್ದೆ, ನಾವೂ ಕೂಡ ಕೋರ್ಟ್ ಗೆ ಮನವಿ ಹಾಕೋಣ ನೀರು ಬಿಡೋದು ಬೇಡ ಎಂದು ಹೇಳಿದ್ದೆ ಆದರೆ ಸರ್ಕಾರ ಎಡವಿತ್ತು ನೀರು ಬಿಡಲಾಯಿತು ಇಂದು ತರಾತುರಿಯಲ್ಲಿ ಸಭೆ ಕರೆದಿದ್ದಾರೆ ಇಂದಿನ ಸಭೆಗೆ ಬೊಮ್ಮಾಯಿ ಯಡಿಯೂರಪ್ಪ, ನಾನು ಯಾರೂ ಹೋಗಲು ಸಾಧ್ಯವಾಗಿಲ್ಲ
ಈ ರಾಜ್ಯದಲ್ಲಿ ಮಹಾನ್ ಕವಿಯೊಬ್ಬರಿದ್ದಾರೆ
ಅವರು ಕುವೆಂಪುರವರ ರಾಮಾಯಣ ದರ್ಶನಂ ಗಿಂತ ದೊಡ್ಡ ಕೃತಿ ಬರೆದಿದ್ದಾರೆ ನಿನ್ನೆ ನೆಲಮಂಗಲದಲ್ಲಿ ನಮ್ಮ ವಿರುದ್ಧ ದೊಡ್ಡ ಭಾಷಣ ಮಾಡಿದ್ದಾರೆ ನಾವೇ ಎಲ್ಲಾ ಯೋಜನೆ ಮಾಡಿದ್ದೇವೆ ಎಂದಿದ್ದಾರೆ ಹೇಮಾವತಿ ಯಿಂದ ತುಮಕೂರಿಗೆ ನೀರು ತಂದಿದ್ದೆ ಎಂದಿದ್ದಾನೆ.
ದೇವೇಗೌಡರ ಹೋರಾಟ ಏನು ಎಂಬುದು ರಾಜ್ಯಕ್ಕೆ ಗೊತ್ತಿದೆ ಪಿಯರ್ಲೆಸ್ ನಲ್ಲಿ ಕೆಲಸಗಾರರಿಗೆ ಸಂಬಳ ಕೊಡದೆ ಓಡಿ ಹೋಗಿದ್ದವರು ಇಂದು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ನಾನು ಇಂದು ಸಭೆಗೆ ಹೋಗಿದ್ದರೆ ಮುಖಕ್ಕೆ ಮಂಗಳಾರತಿ ಮಾಡುತ್ತಿದ್ದೆ
ವಿರಪ್ಪಮೊಯ್ಲಿ ವಿರುದ್ಧ ಹೆಚ್ಡಿಕೆ ಕೆಂಡಾಮಂಡಲ ಅವರೊಬ್ಬರನ್ನೇ ಇಟ್ಟುಕೊಂಡು ಸಭೆ ಮಾಡಿ ಎಂದು ಆಕ್ರೋಶ ಟ್ರಿಬ್ಯುನಲ್ ರಚನೆ ಆಗಿದ್ರಿಂದ ಈ ಎಲ್ಲಾ ಸಮಸ್ಯೆ ಆಗಿದೆ ನಾವು ಹೇಗೋ ಅಲ್ಪ ಸ್ವಲ್ಪ ನೀರು ಬಿಟ್ಟುಕೊಂಡು ಬಂದಿದ್ದು ಪುಟ್ಟಸ್ವಾಮಿಗೌಡ ನೀರಾವರಿ ಮಂತ್ರಿ ಆದಾಗ ಆದ ಅನಾಹುತ ಇದು
ದೇವೇಗೌಡರ ಹೋರಾಟದಿಂದ ಕಾವೇರಿಯಿಂದ 14 ಟಿಎಂಸಿ ಹೆಚ್ಚುವರಿ ನೀರು ಸಿಕ್ಕಿದೆ ಸುಪ್ರೀಂಕೋರ್ಟ್ ನಲ್ಲಿ ತೀರ್ಮಾನ ಮಾಡೋವರೆಗೂ ನೀರು ಬಿಡೋದು ಬೇಡ ಇಲ್ಲೇ ಸಂಕಷ್ಟ ಇರೋವಾಗ ಯಾವ ರೀತಿ ನೀರು ಬಿಡುತ್ತೀರಿ ತೀರ್ಮಾನ ಹೊರ ಬರುವವರೆಗೂ ಕಾಯಬೇಕು
ಇದನ್ನೆಲ್ಲಾ ಬಿಟ್ಟು ಆಪರೇಷನ್ ಅಂತ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿ ರಾಜ್ಯದ ಜನ 136 ಸೀಟು ಕೊಟ್ಟಿದ್ದಾರೆ ಮೊದಲು ಅದನ್ನ ಉಳಿಸಿಕೊಳ್ಳಿ ಮೊದಲು ತಮಿಳುನಾಡಿನವರು ಆಪರೇಷನ್ ಮಾಡುತ್ತಿರೋದನ್ನ ತಪ್ಪಿಸಿಕೊಳ್ಳಿ ದೇವೇಗೌಡರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಿ
ವೀರಪ್ಪ ಮೊಯ್ಲಿ ವಿರುದ್ಧ ನೇರಾ ನೇರಾ ತರಾಟೆ ಚಿಕ್ಕಬಳ್ಳಾಪುರದಲ್ಲಿ ಚುನಾವಣೆಗೆ ನಿಲ್ಲೋದಕ್ಕೆ ಈಗ ಓಡಾಡಿ ಮಾಡುತ್ತಿದ್ದಾರೆ ಈ ಟ್ರಿಬ್ಯುನಲ್ ರಚನೆ ಆಗೋದಕ್ಕೆ ಇವರೇ ಕಾರಣ ಎಂದು ಕಿಡಿಕಾರಿದ್ದಾರೆ.
HD Revanna: ಎತ್ತಿನಹೊಳೆ ಕಾಮಗಾರಿ ವೀಕ್ಷಿಸಿದ ಮಾಜಿ ಸಚಿವ ಹಾಲಿ ಶಾಸಕ ಹೆಚ್ ಡಿ ರೇವಣ್ಣ**
Siddaramaiah: ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಸರ್ವಪಕ್ಷ ಸಭೆ; ಸಿಎಂ