ನನ್ನ 50ನೇ ಸಿನಿಮಾ ನನಗೆ ಬಹಳ ನೋವು ಕೊಟ್ಟ ಚಿತ್ರ..!
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಾರ್ಗವ್ ಪ್ರಸಿದ್ಧ ಕಲಾವಿದ ಹುಣಸೂರು ಕೃಷ್ಣಮೂರ್ತಿಯವರ ಅಣ್ಣನ ಮಗ. ಇವರೇ ನಿರ್ದೇಶಕ ಭಾರ್ಗವ್ ಅವರನ್ನ ಓದಿಸಿ, ಬೆಳೆಸಿದ್ದು..
ಲೆಕ್ಕಾಧಿಕಾರಿಯಾಗಬೇಕೆಂಬ ಆಸೆ ಹೊತ್ತಿದ್ದ ಭಾರ್ಗವ್ ಅವರಿಗೆ ಸಿನಿಮಾಗೆ ಕ್ಲಾಪ್ ಹೊಡೆಯೋದನ್ನ ಹೇಳಿಕೊಟ್ರು. ಹುಣಸೂರು ಕೃಷ್ಣಮೂರ್ತಿಯವರು “ವೀರ ಸಂಕಲ್ಪ” ಸಿನಿಮಾ ನಿರ್ಮಿಸುವಾಗ ಭಾರ್ಗವ್ ಅವ್ರಿಗೆ ಕ್ಲಾಪ್ ಹೊಡೆಯೋದನ್ನ ಹೇಳಿಕೊಟ್ಟರು. ಹೀಗೆ ನಾ ನಿನ್ನ ಮರೆಯಲಾರೆ, ಭಕ್ತ ಕುಂಬಾರ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದಿದ್ದಾರೆ.
ಹೀಗೆ ಸಹಾಯಕ ನಿದೇಶಕ, ಸಹ ನಿರ್ದೇಶಕನಾದರು. ಬಳಿಕ ಡಾ.ರಾಜ್‌ಕುಮಾರ್ ಹಾಗೂ ಸರೋಜಾದೇವಿ ನಟಿಸಿರೋ ಭಾಗ್ಯವಂತರು ಸಿನಿಮಾ ಮೂಲಕ ನಿರ್ದೇಶಕನಾದರು. “ಒಲವು ಗೆಲುವು” ಇವರ ನಿರ್ದೇಶನದ ಎರಡನೆಯ ಸಿನಿಮಾವಾಗಿತ್ತು. ಆದರೆ, ಆಗ ರಾಜ್‌ಕುಮಾರ್ ಸ್ಟಾರ್ ನಟನನಾಗಿದ್ದವರು, ಯಶಸ್ಸು ಸುಲಭ ಎಂಬ ಮಾತಿತ್ತು. ನಂತರ ವಿಷ್ಣುವರ್ಧನ್ ಅವರಿಗೆ “ಅಸಾಧ್ಯ ಅಳಿಯ” ಸಿನಿಮಾ ನಿರ್ದೇಶಿಸಿದಾಗ ಸಿನಿಮಾ ಹಿಟ್ ಆಯಿತು. ಬಳಿಕ ವಿಷ್ಣವರ್ಧನ್ ಅವರಿಗೆಯೇ ಸಾಕಷ್ಟು ಸಿನಿಮಾಗಳನ್ನ ನಿರ್ದೇಶಿಸಿ ಎಲ್ಲವೂ ಹಿಟ್ ಆದಾಗ ಇವ್ರನ್ನ ವಿಷ್ಣುವರ್ಧನ್ ಡೈರೆಕ್ಟರ್ ಅಂತಲೇ ಕರೆಯಲು ಅಭಿಮಾನಿಗಳು ಶುರುಮಾಡಿದರು.
ಇನ್ನು ವಿಷ್ಣು ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳುತ್ತಿರಲಿಲ್ಲ, ಹಚ್ಚಿಕೊಂಡರೇ ನೇರ ಹೃದಯಕ್ಕೇನೇ ಅಂತಾರೆ ಭಾರ್ಗವ್. ಎಂಜಲು ಲೋಟ ಎತ್ತುವದರಿಂದ ತನ್ನ ದುಡಿಮೆಯನ್ನ ಶುರುಮಾಡಿರೋ ನಿರ್ದೇಶಕ ಭಾರ್ಗವ್, 300 ರೂಪಾಯಿಯಲ್ಲೇ ತಮ್ಮ ಜೀವನ ನಡೆಸುತ್ತಿದ್ದರಂತೆ. ಇನ್ನು ತಮ್ಮ 50ನೇ ಸಿನಿಮಾ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ “ಗಂಡುಗಲಿ ಕುಮಾರ ರಾಮ” ಸಿನಿಮಾ ನಿರ್ದೇಶಕ ಭಾರ್ಗವ್‌ಗೆ ಸಾಕಷ್ಟು ನಷ್ಟ ಎದುರಿಸೋ ಹಾಗೇ ಮಾಡಿತು. ಅಂತಹ ಏನಾಯ್ತು ಅನ್ನೋದು ನಿಮಗೆ ತಿಳಿಯಬೇಕಾದ್ರೆ, ಜೊತೆಗೆ ಕನ್ನಡ ಚಿತ್ರರಂಗದ ಇನ್ನೂ ಸಾಕಷ್ಟು ರೋಚಕ ವಿಷಯಗಳನ್ನ ನಿರ್ದೇಶಕ ಭಾರ್ಗವ್ ಕರ್ನಾಟಕ ಟಿವಿ ಜೊತೆ ಹಂಚಿಕೊಂಡಿದ್ದಾರೆ.
ನಳಿನಾಕ್ಷಿ ಕಾರಹಳ್ಳಿ, ಕರ್ನಾಟಕ ಟಿವಿ