Devotional:
ಪುರಾಣಗಳ ಪ್ರಕಾರ ವಿಷ್ಣುಮೂರ್ತಿ ಪಾಪಿಗಳನ್ನು ಸಂಹರಿಸಿ ಧರ್ಮವನ್ನು ರಕ್ಷಿಸಲು ಹಾಗೂ ಜಗತ್ತನ್ನು ರಕ್ಷಿಸಲು ವಿವಿಧ ಅವತಾರಗಳನ್ನು ಎತ್ತಿದರು ಎಂದು ನಮಗೆ ತಿಳಿದಿದೆ. ಈ ಕ್ರಮದಲ್ಲಿ ಶ್ರಾವಣ ಮಾಸದ ಅಷ್ಟಮಿ ತಿಥಿಯಂದು ವಿಷ್ಣುಮೂರ್ತಿ ಕೃಷ್ಣನ ರೂಪದಲ್ಲಿ ವಸುದೇವ ಮತ್ತು ದೇವಕಿ ಜನಿಸಿದರು. ಅವರು ಕೃಷ್ಣನ ಅವತಾರದಲ್ಲಿ ಭೂಮಿಯಲ್ಲಿ ಏಕೆ ಜನ್ಮ ತಾಳಿದರು ಎಂಬ ವಿಷಯಕ್ಕೆ ಬಂದರೆ. ಕಂಸನೆಂಬ ರಾಜನು ತನ್ನ ತಂದೆಯಿಂದ ಬಲವಂತವಾಗಿ ರಾಜ್ಯವನ್ನು ವಶಪಡಿಸಿಕೊಂಡನು. ಈ ಪ್ರಕ್ರಿಯೆಯಲ್ಲಿ ಕಂಸನು ನರಕಾಸುರ ಮತ್ತು ಬಾಣಾಸುರನ ಮಾತುಗಳಿಂದ ಪ್ರಭಾವಿತನಾಗುತ್ತಾನೆ. ಈ ಕ್ರಮದಲ್ಲಿ ಕಂಸನ ಸಹೋದರಿ ದೇವಕಿ ಮತ್ತು ವಸುದೇವನ ಮದುವೆಯಾಗುತ್ತದೆ. ಮತ್ತು ಕಂಸನು ಸ್ವತಃ ಸಾರಥಿಯಾಗಿ ಅವರ ಅತ್ತೆಯ ಮನೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ಆಕಾಶವಾಣಿ ಭವಿಷತ್ಅನ್ನು ನುಡಿಯುತ್ತದೆ.
ಓ ಕಂಸಾ ನಿನ್ನ ತಂಗಿಯ ಮದುವೆಯ ನಂತರ ನೀನು ಅವಳನ್ನು ತುಂಬಾ ಸಂತೋಷದಿಂದ ಅತ್ತೆಯ ಮನೆಗೆ ಕರೆದು ಕೊಂಡು ಹೋಗುತ್ತಿದೀಯಾ, ಆದರೆ ಅವಳಿಗೆ ಹುಟ್ಟುವ ಎಂಟನೆಯ ಮಗುವಿನಿಂದಾಗಿ ನಿನ್ನಗೆ ಮರಣ ಸಂಭಿಸುತ್ತದೆ ಎಂದು ಆಕಾಶವಾಣಿ ನುಡಿಯುತ್ತದೆ, ನಂತರ ತುಂಬಾ ಆಗ್ರಹಕೋಳಗಾದ ಕಂಸನು ನಿನ್ನ ಸಂತಾನದಿಂದ ನನಗೆ ಮರಣ ಸಂಭಿಸುವುದ, ಎಂದು ಭಾವಿಸಿ ತನ್ನ ತಂಗಿಯನ್ನು ಕೊಂದರೆ ಮರಣ ಬರುವುದಿಲ್ಲ ಎಂದು ತನ್ನ ತಂಗಿಯನ್ನೇ ಕೊಲ್ಲಲು ಮುಂದಾಗುತ್ತಾನೆ. ನಂತರ ವಸುದೇವನು ತನ್ನ ತಂಗಿಯನ್ನು ಕೊಲ್ಲದಿರಲು ಕಂಸನಿಗೆ ಮನವಿ ಮಾಡುತ್ತಾನೆ, ನಂತರ ಕಂಸ ಅವರನ್ನು ಮಥುರಾದಲ್ಲಿ ಬಂಧಿಸುತ್ತಾನೆ, ಈ ಕ್ರಮದಲ್ಲಿ ಅವರು ಮೊದಲನೇ ಮಗುವಿಗೆ ಜನ್ಮ ನೀಡುತ್ತಾರೆ, ಈ ವಿಷಯವನ್ನು ಕಾವಲುಗಾರರು ಕಂಸನಿಗೆ ತಿಳಿಸುತ್ತಾರೆ, ನಂತರ ಕಂಸ ಬಂದು ಆ ಮಗುವನ್ನು ಕೊಲ್ಲುತ್ತಾನೆ. ಹೀಗೆ ಅವರಿಗೆ ಹುಟ್ಟಿದ 7ಮಕ್ಕಳನ್ನು ಕಂಸನು ಕೊಲ್ಲಿಬಿಡುತ್ತಾನೆ. ಆದರೆ ಈ ವೇಳೆ ದೇವಕಿ 8ನೇಬಾರಿ ಗರ್ಭವತಿಯಾಗಿ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ, ಆ ಸಮಯದಲ್ಲಿ ಬಾಗಿಲು ತಾನಾಗಿಯೇ ತೆರೆದುಕೊಳ್ಳುತ್ತದೆ ನಂತರ ಕಾವಲುಗಾರರು ನಿದ್ರೆಗೆ ಜಾರಿಬಿಡುತ್ತಾರೆ, ವಸುದೇವನು ಮಗುವನ್ನು ತೆಗೆದುಕೊಂಡು ಗೋಕುಲದಲ್ಲಿ ನಂದನ ಹೆಂಡತಿ ಯಶೋಧರ ಬಳಿ ಬಿಟ್ಟನು. ನಂತರ ಅವರಿಗೆ ಹುಟ್ಟಿದ ಹೆಣ್ಣು ಮಗುವನ್ನು ಮದುರಾಗೆ ತೆಗೆದುಕೊಂಡು ಬರುತ್ತಾರೆ .
ಈ ಸಮಯದಲ್ಲಿ ಮಗು ಅಳುವುದನ್ನು ಕೇಳಿ ಎಚ್ಚರಗೊಂಡ ಕಾವಲುಗಾರರು ದೇವಕಿಯು ಅಷ್ಟಮವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಕಂಸನಿಗೆ ತಿಳಿಸಿದರು. ಕಂಸನು ಆ ಮಗುವನ್ನು ಕೊಲ್ಲಲು ಪ್ರಯತ್ನಿಸಿದಾಗ, ಆ ಮಗು ಗಾಳಿಯಲ್ಲಿ ಹಾರಿ, ಕಂಸ ನಿನ್ನನ್ನು ಕೊಲ್ಲುವವನು ಎಲ್ಲಿಯೂ ಇಲ್ಲ ಅವನು ಗೋಕುಲದಲ್ಲಿ ಬೆಳೆಯುತ್ತಿದ್ದಾನೆ ಎಂದು ಹೇಳಿ ಕಣ್ಮರೆಯಾಗುತ್ತಾಳೆ. ಈ ರೀತಿಯಾಗಿ ಕನ್ನಯ್ಯನು ರಾಜಮನೆತನದಲ್ಲಿ ಜನಿಸಿದನು ಆದರೆ ಗೋಕುಲದಲ್ಲಿ ಗೋಪಾಲಕನಾಗಿ ಬೆಳೆದು ಅಂತಿಮವಾಗಿ ಕಂಸನನ್ನು ಕೊಂದನು.ಈ ರೀತಿಯಲ್ಲಿ ಶ್ರೀಕೃಷ್ಣನು ವಿಷ್ಣುವಿನ ಅವತಾರವಾಗಿ ಕಂಸನನ್ನು ಕೊಲ್ಲಲು ಜನಿಸಿದನು.