ಒಮ್ಮೆ ನಾರದರು ನಾರಾಯಣ ಮಂತ್ರವನ್ನು ಪಠಿಸುತ್ತಾ ವೈಕುಂಠವನ್ನು ತಲುಪಿದರು. ದೇಗುಲದ ಮೇಲೆ ನೀಲಿ ಕಣ್ಣುಗಳಿಂದ ಕೂಡಿದ ವಿಷ್ಣುವನ್ನು ನೋಡಿದಾಗ ನಾರದನಲ್ಲಿ ಒಂದು ಆಲೋಚನೆ ಹೊಳೆಯುತ್ತದೆ. ಈ ವೈಕುಂಠದಲ್ಲಿ ವಿಶ್ರಮಿಸುವ ಮಹಾವಿಷ್ಣುವಿಗೆ ನನಗಿಂತ ಮಿಗಿಲಾದ ಭಕ್ತರು ಯಾರು..? ಎಂದು ಅಂದುಕೊಳ್ಳುತ್ತಾನೆ. ಆ ವಿಷ್ಯದ ಬಗ್ಗೆ ಸಾಕ್ಷಾತ್ ವಿಷ್ಣುಮೂರ್ತಿಯ ಬಾಯಿಯಲ್ಲಿ ಆ ಮಾತುಗಳಲ್ಲಿ ಕೇಳಲು ನಾರದನು ಬಯಸಿದನು. ಅವರ ಹಿರಿಮೆಯನ್ನು ನೇರವಾಗಿ ಕೇಳುವುದು ಉತ್ತಮವಲ್ಲ ಎಂದು ನಾರದ ಹೀಗೆ ಕೇಳಿದರು.
ಓ ದೇವರೇ! ಈ ಮೂರುಲೋಕದಲ್ಲಿ ನಿಮನ್ನು ಅತ್ಯಂತ ಭಕ್ತಿಯಿಂದ ಪ್ರಾರ್ಥಿಸುವವರು ಪೂಜಿಸುವವರು , ನಿಮಗೆ ಹೆಚ್ಚು ಶ್ರದ್ಧೆಯುಳ್ಳವರು ಯಾರು ಎಂದು ಕೇಳಿದನು ಹಾಗ ವಿಷ್ಣುಮೂರ್ತಿ ಅದು ಕಷ್ಟದ ಪ್ರಶ್ನೆ ಅಲ್ಲವೇ ಅಲ್ಲ. ಆ ಹಳ್ಳಿಯಲ್ಲೊಂದು ಪುಟ್ಟ ಗುಡಿಸಲು ಕಾಣುತ್ತಿದೆ ಯಲ್ಲವ, ಅದರಲ್ಲಿ ಒಬ್ಬ ರೈತ ವಾಸಿಸುತ್ತಾನೆ. ನನನ್ನು ಈ ಲೋಕದಲ್ಲಿ ತೀವ್ರವಾಗಿ ಧ್ಯಾನಿಸುವವರು ಅವರೇ! ಎಂದರು ವಿಷ್ಣುಮೂರ್ತಿ. ಆ ಮಾತುಗಳಿಂದ ನಾರದರಿಗೆ ಸಿಟ್ಟು ಬಂದಿತು, ನಿರಂತರವಾಗಿ ಹರಿನಾಮಸ್ಮರಣೆ ಮಾಡುವ ನಂಗಿಂತ ಆ ಸಣ್ಣ ರೈತ ದೊಡ್ಡ ಭಕ್ತನಾಗುವುದು ಹೇಗೆ? ಎಂದು ಯೋಚಿಸುತ್ತಾ ತಮ್ಮ ದಿವ್ಯ ದೃಷ್ಟಿಯಿಂದ ರೈತನ ಜೀವನವನ್ನು ಒಮ್ಮೆ ನೋಡಿದರು.
ಆ ರೈತ ಕಡು ಬಡವ. ಇವರ ಜೀವನೋಪಾಯಕ್ಕೆ ಕೇವಲ ಒಂದು ಎಕರೆ ತೋಟವಿದೆ. ಸೌಲಭ್ಯಗಳಿಲ್ಲದ ಆ ಒಂದು ಎಕರೆ ಜಮೀನಿನಲ್ಲಿ ನಾನಾ ಕೆಲಸಗಳನ್ನು ಮಾಡಿದರೂ ಬೊಟಬಾಟಿಕನಿಂದ ಊಟ ಸಿಗುತ್ತಿರಲಿಲ್ಲ ಮುಂಜಾನೆ ಎದ್ದಂದಿನಿಂದ ರಾತ್ರಿ ಮಲಗುವವರೆಗೂ ಸಾಕ್ಷಾತ್ ಭಗವಂತನನ್ನು ಸ್ಮರಿಸುವುದು ಸುಲಭವಲ್ಲ . ದಿನದಲ್ಲಿ ಮಹಾ ಎಂದರೆ ನಾಲ್ಕೈದು ಬಾರಿ ನಾರಾಯಣನನ್ನು ಸ್ಮರಿಸುತ್ತಿದ್ದನು ಅಷ್ಟೇ ಅಂತಹ ರೈತನು ತನಗಿಂತ ದೊಡ್ಡ ಭಕ್ತನೆಂದು ವಿಷ್ಣುವು ಹೇಳಿದ ಕೂಡಲೇ ನಾರದನಿಗೆ ಬಹಳ ನಾಚಿಕೆಯಾಯಿತು. ಏನು ಮಾಡುವುದೆಂದು ಯೋಚಿಸುತ್ತಿದ್ದನು. ಈ ಮಧ್ಯೆ ವಿಷ್ಣುಮೂರ್ತಿ…
ನೀನು ನನಗೆ ಸ್ವಲ್ಪ ಸಹಾಯ ಮಾಡಬಲ್ಲೆಯ ನಾರದ! ಈ ಹಾಲಿನ ಪಾತ್ರೆಯನ್ನು ಬ್ರಹ್ಮಲೋಕಕ್ಕೆ ಕೊಟ್ಟು ಬರುತ್ತೀಯ? ಆದರೆ ದಾರಿ ಮಧ್ಯೆ ಹಾಲು ಚೆಲ್ಲಬಾರದು! ಒಂದು ಹನಿ ಚೆಲ್ಲಿದರೂ ಅಪಚಾರವಾಗುತ್ತದೆ ಎಂದು ಹಾಲು ತುಂಬಿದ ಪಾತ್ರೆಯನ್ನು ನಾರದನಿಗೆ ಕೊಟ್ಟನು. ಓ ಅದು ನನ್ನ ಭಾಗ್ಯ! ಎಂದ ನಾರದ ಹಾಲನ್ನು ತೆಗೆದುಕೊಂಡು ಹೋದರು .ಇಗೆ ಮಾಡಿದರೆ ಸ್ವಾಮಿಗೆ ಅವನ ಮೇಲಿನ ನಿಷ್ಠೆ ಬಯಲಾಗುತ್ತದೆ ಎಂದುಕೊಂಡರು. ಸಾವಿರ ಜನ್ಮ ಎತ್ತಿದರು ಆ ರೈತ ಇಂಥ ಕೆಲಸ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಬಟ್ಟಲನ್ನು ತುಂಬಿ ಬ್ರಹ್ಮಲೋಕಕ್ಕೆ ಕೊಂಡೊಯ್ದರು. ಅಲ್ಲಿ ಅವರು ಅದನ್ನು ಸುರಕ್ಷಿತವಾಗಿ ತಲುಪಿಸಿದರು ಮತ್ತು ವಿಜಯ ಗರ್ವದಿಂದ ವಿಷ್ಣು ಮೂರ್ತಿಯ ಹತ್ತಿರ ತಲುಪಿದರು.
ಅದ್ಭುತವಾದ ಕೆಲಸ ಮಾಡಿದ್ದೀರಿ. ಸಂತೋಷ ನಾರದ! ಆದರೆ ಸ್ವಲ್ಪ ಅನುಮಾನ.. ನೀನು ಹಾಲಿನ ಕುಂಡವನ್ನು ತೆಗೆದುಕೊಂಡು ಹೋಗುವಾಗ ಎಷ್ಟು ಸಲ ನನ್ನ ನಾಮವನ್ನು ಸ್ಮರಿಸಿದ್ದೀಯಾ ಎಂದು ವಿಷ್ಣುಮೂರ್ತಿ ಕೇಳಿದರು. ಆ ಪ್ರಶ್ನೆಯನ್ನು ಕೇಳಿ ನಾರದನು ಬೆರಗಾಗಿ ಹೋದನು ಏಕೆಂದರೆ ಅವನ ಗಮನವೆಲ್ಲ ಹಾಲು ಅಲುಗಾಡದಂತೆ ನೋಡಿಕೊಳ್ಳುವುದರ ಮೇಲೆ ಇತ್ತು .ಹಾಗಾಗಿ ನಾರಾಯಣನನ್ನು ನೆನೆದುಕೊಳ್ಳುವ ಅವಕಾಶವಿಲ್ಲ ದಂತಾಯಿತು ,ನಾರದನಿಗೆ ಆಗ ಅರ್ಥವಾಯಿತು. ಪ್ರಶ್ನೆಯಲ್ಲಿ ವಿಷ್ಣುಮೂರ್ತಿಯ ಅಂತರಂಗ! ಈ ದಿನ ಅವರು ಯಾವುದೋ ಕೆಲಸದಲ್ಲಿ ನಿರತರಾಗಿದ್ದರು ನಾರಾಯಣನನ್ನು ನೆನೆಸಿಕೊಳ್ಳುವುದೇ ಮರೆತುಬಿಟ್ಟರು.
ಹೀಗಿರುವಾಗ ರೈತ ಇಷ್ಟೆಲ್ಲಾ ಕಷ್ಟ, ಕಷ್ಟಗಳನ್ನು ಸಹಿಸಿಕೊಂಡು ತನ್ನೆಲ್ಲ ಆಯಾಸದಲ್ಲೂ ನಾರಾಯಣನನ್ನು ನೆನೆಸಿಕೊಳ್ಳುವುದು ನಿಲ್ಲಿಸಲಿಲ್ಲ. ಬೆಳಗ್ಗೆ ಎದ್ದ ತಕ್ಷಣ ವಿಷ್ಣುಮೂರ್ತಿಯ ಮೇಲೆ ಭಾರ ಹಾಕಿ ತನ್ನ ಕೆಲಸ ಶುರುಮಾಡುತ್ತಾನೆ . ದಿನವಿಡೀ ಎಷ್ಟೇ ಸಂಕಟ ಅನುಭವಿಸಿದರೂ ರಾತ್ರಿ ಮಲಗುವ ಮುನ್ನ ನಾರಾಯಣನನ್ನು ನೆನೆದು ಕೃತಜ್ಞತೆ ಸಲ್ಲಿಸಿದೆ ನಿದ್ದೆಮಾಡುವುದಿಲ್ಲ . ಎಲ್ಲವೂ ಇರುವಾಗ ಭಗವಂತನನ್ನು ಸ್ಮರಿಸುವುದೇ ಶ್ರೇಷ್ಠವಲ್ಲ, ಅಭಾವದಲ್ಲಿಯೂ ಅವನನ್ನು ಸ್ಮರಿಸುವುದು ಶ್ರೇಷ್ಠವೆಂದು ನಾರದನಿಗೆ ಅರ್ಥವಾಯಿತು! ಆರ್ಭಟಕ್ಕಿಂತ ಭಕ್ತಿ ಮುಖ್ಯ ಎಂಬ ತತ್ವವನ್ನೂ ಬೋಧಿಸಲಾಗುತ್ತದೆ.