ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಮರಾಠ ಪ್ರಾಧಿಕಾರ ರಚನೆ ಮಾಡಿದ್ದು ತಪ್ಪು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ವಿಶ್ವನಾಥ್, ಮರಾಠ ಪ್ರಾಧಿಕಾರ ರಚನೆ ಮಾಡಿದ್ದು ತಪ್ಪು. ನಾಳಿನ ಬಂದ್ ಕರೆ ವಿಚಾರ ಏನೆ ಇರಲಿ. ಮರಾಠ ಪ್ರಾಧಿಕಾರ ಮಾಡಿದ್ದು ತಪ್ಪು. ಭಾಷೆಗಾಗಿ ಗಡಿಯಲ್ಲಿ ಹೋರಾಟ ಆಗ್ತಿದೆ. ಹಾಗಂತ ಭಾಷೆಗೊಂದು ಪ್ರಾಧಿಕಾರ ಮಾಡೋಕೆ ಆಗುತ್ತಾ? ನಾಳೆ ಮತ್ತೊಂದು ಭಾಷೆಯವರು ಒತ್ತಾಯ ಮಾಡಿದ್ರೆ ಏನ್ ಮಾಡೋದು..? ನಾನು ಕನ್ನಡ ಹೋರಾಟದಿಂದ ಬಂದವನು. ನನಗೆ ಭಾಷೆ ಬಗ್ಗೆ ಅಭಿಮಾನ ಇದೆ. ಹಾಗಾಗಿ ಮರಾಠ ಪ್ರಾಧಿಕಾರ ಮಾಡಿದ್ದನ್ನ ನಾನು ಒಪ್ಪಲ್ಲ ಎಂದು ಹೇಳಿದ್ದಾರೆ.

ಇನ್ನು ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಕುರಿತು, ಯೋಗೇಶ್ವರ್ ಹಣ ತೆಗೆದುಕೊಂಡಿದ್ದರ ಬಗ್ಗೆ ಮಾತನಾಡಿದ ವಿಶ್ವನಾಥ್, ಯೋಗೇಶ್ವರ್ ಹಣ ತೆಗೆದುಕೊಂಡು ಹೋಗಿದ್ದಾರೆ ಅಂತ ಹೇಳಿದ್ದು ನಿಜ. ದೊಡ್ಡ ಮೊತ್ತ ಅಂದ್ರೆ 5 ಲಕ್ಷ ಹಣ. ನನ್ನ ಪಾಲಿಗೆ 5 ಲಕ್ಷ ದೊಡ್ಡ ಮೊತ್ತವೇ. ತೆರಿಗೆ ಲೆಕ್ಕದಲ್ಲು 5 ಲಕ್ಷ ದೊಡ್ಡ ಮೊತ್ತವೇ. ನೀವು ಸಿಎಂ ಆಗಿದ್ದವರು ಹಾಗಾಗಿ ನಿಮಗೆ ಕೋಟ್ಯಂತರ ರೂ ದೊಡ್ಡ ಮೊತ್ತ ಇರಬೇಕು. ನನಗೆ ಇದೆ ದೊಡ್ಡ ಮೊತ್ತ. ಅದನ್ನ ಯೋಗೇಶ್ವರ್ ಹಾಗೂ ಸಂತೋಷ್ ತೆಗೆದುಕೊಂಡು ಹೋದರೂ ಅಂತ ಹೇಳಿದ್ದೇನೆ. ನೀವು ಜಿಟಿಡಿಗೆ ಹಣ ಕೊಟ್ಟಿದ್ದೇವೆ ಅಂದ್ರಲ್ಲ ಅದು ಯಾವ ಹಣ..? ಅದು ಬ್ಲಾಕ್ ಮನಿಯೋ ವೈಟ್ ಮನಿಯೋ? ಎಷ್ಟು ಕೋಟಿ ಅಂತ ನೀವು ಬಹಿರಂಗ ಪಡಿಸಿ ಎಂದು ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಮಲ್ಲೇಶ್, ಮೈಸೂರು, ಕರ್ನಾಟಕ ಟಿವಿ




