ವಿಠಲ ಗೌಡ ಸ್ಫೋಟಕ ವಿಡಿಯೋ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪಗಳ ಕೇಸ್‌ಗೆ ಒಂದು ಸಣ್ಣ ಬ್ರೇಕ್‌ನ ಬಳಿಕ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಬುರುಡೆ ಗ್ಯಾಂಗ್‌ ನಂಟು ಹೊಂದಿರುವ ಎಲ್ಲರನ್ನೂ, ಎಸ್‌ಐಟಿ ಅಧಿಕಾರಿಗಳು ಗ್ರಿಲ್‌ ಮಾಡ್ತಿದ್ದಾರೆ. ಇದರಲ್ಲಿ ಸೌಜನ್ಯ ಮಾವ ವಿಠಲ ಗೌಡ ಅವರ ವಿಚಾರಣೆಯನ್ನು ಮುಗಿಸಲಾಗಿದೆ. ಎಸ್‌ಐಟಿ ವಿಚಾರಣೆ ಮುಗಿದ ಬೆನ್ನಲ್ಲೇ ವಿಠಲ ಗೌಡ ಅವರು ವಿಡಿಯೋವೊಂದನ್ನ ರಿಲೀಸ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸ್ಪೋಟಕ ಮಾಹಿತಿಯನ್ನು ಹೊರಹಾಕಲಾಗಿದೆ. 2 ನಿಮಿಷಗಳ ವಿಡಿಯೋದಲ್ಲಿ ವಿಠಲ ಗೌಡ ಮಾತು, ನಿಗೂಢ ಸಾವುಗಳ ಆರೋಪಕ್ಕೆ ಹೊಸ ಜೀವ ತಂದಿದೆ.

ಬಂಗ್ಲಗುಡ್ಡ ಕಾಡಿನಲ್ಲಿ ಹೆಣಗಳ ರಾಶಿಯೇ ಪತ್ತೆಯಾಗಿದೆಯಂತೆ. ಬಂಗ್ಲಗುಡ್ಡಕ್ಕೆ ನನ್ನನ್ನು ಎಸ್‌ಐಟಿಯವರು 2 ಸಲ ಕರೆದುಕೊಂಡು ಹೋಗಿದ್ದಾರೆ. ಎರಡೂ ಬಾರಿ ಹೋದಾಗಲೂ ಮೂಳೆಗಳು ಸಿಕ್ಕಿವೆ. ಮೊದಲ ಸಲ 3 ಮನುಷ್ಯರ ಕಳೇಬರ ಸಿಕ್ಕಿದೆ. ಎರಡನೇ ಸಲ ಹೋದಾಗ 5 ಮನುಷ್ಯರ ಕಳೇಬರ ಸಿಕ್ಕಿದೆ. ಸಣ್ಣ ಮಗುವಿನ ಎಲುಬು ಕೂಡ ಇದ್ದಂತೆ ಕಾಣಿಸಿದೆ.

ವಾಮಾಚಾರಕ್ಕೆ ಬಳಸುವ ವಸ್ತುಗಳು ಕೂಡ ಸಿಕ್ಕಿದೆ. ಐದಾರು ಕಳಶಗಳು ಇತ್ತು. ಹೂತಿಟ್ಟ ಶವಗಳನ್ನು ಕಾಣದಂತೆ ಮಾಡಲು, ಮಣ್ಣು ತೆಗೆದು ಹಾಕಿದ್ದು ಕಾಣುತ್ತಿತ್ತು. ಐದಾರು ಫೀಟ್‌ನಲ್ಲಿ ಬುರುಡೆಗಳ ರಾಶಿ ಇದೆ. ಎಲುಬು ಅಲ್ಲಲ್ಲಿ ಸ್ಪ್ರೆಡ್ ಆಗಿದೆ. ಕಳೆಬರಹಗಳು ಅಲ್ಲಲ್ಲಿ ಇತ್ತು, ಬುರುಡೆಗಳು ಮಣ್ಣಲ್ಲಿ ಎದ್ದು ಕಾಣ್ತಿತ್ತು.

ನೋಡಿದ ಬುರುಡೆಗಳು ಹಾಗೆ ಇದೆ. ಆದ್ರೆ, ಅದನ್ನು ಮುಟ್ಟಿಲ್ಲ. ತನಿಖೆಗೆ ಯಾವಾಗ ಕರೆದ್ರು ಬರ್ತೇನೆ. ನಿಮ್ಮ ತನಿಖೆಗೆ ಸಿದ್ದ ಇದ್ದೇನೆ ಅಂತಾ ಅಧಿಕಾರಿಗಳಿಗೆ ಹೇಳಿದ್ದೇವೆ. ಚಿನ್ನಯ್ಯ, ತೆನಸಿ, ರಂಗ, ಸುಬ್ರಹ್ಮಣ್ಯ ಎಲ್ಲಾ ಹೇಳಿದ್ದಾರೆ. ಅವರ ಮಾಹಿತಿ ಪ್ರಕಾರ ಎಲ್ಲಾ ತೋರಿಸಲು ರೆಡಿ ಇದ್ದೇನೆ. ಅದೇ ಊರಲ್ಲಿ ಇದ್ದು ಒಂದೇ ಕಡೆ ರಾಶಿ ಹಾಕಿದ್ದು ನೋಡಿ ಅಚ್ಚರಿ ಆಗಿದೆ. ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ. ಅದರಲ್ಲಿ ಯಾವುದೇ ಡೌಟ್ ಇಲ್ಲ ಅಂತಾ, ವಿಠಲ್‌ ಗೌಡ ಹೇಳಿದ್ದಾರೆ.

About The Author