ಹಾಸನ: ವೋಟರ್ ಐಡಿ ಹಗರಣ ವಿವಾದದ ಕುರಿತು ಬೇಲೂರಿನಲ್ಲಿ ಸಣ್ಣ ನೀರಾವರಿ ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದು, ಎಲೆಕ್ಷನ್ ಕಮಿಷನ್ ಸ್ವಾಯತ್ತ ಸಂಸ್ಥೆ. ಸಂವಿಧಾನ ಬದ್ದವಾದದ್ದು, ಅವರು ಆರು ತಿಂಗಳ ಮೊದಲೇ ಪರಿಷ್ಕರಣೆ ಆರಂಭ ಮಾಡುತ್ತಾರೆ. ಕಾಲ ಕಾಲಕ್ಕೆ ನಿರ್ಧಾರಗಳನ್ನು ಬದಲಾಯಿಸುತ್ತಿರುತ್ತಾರೆ. ಮೊದಲೆಲ್ಲಾ ಒಂದೇ ಸಾರಿ ಓಟರ್ ಲಿಸ್ಟ್‌ನಲ್ಲಿದ್ದವರನ್ನು ಕೈಬಿಡುವ ಪ್ರಕ್ರಿಯೆ ಇರಲಿಲ್ಲ ಈಗ ಪರಿಶೀಲನೆ ಮಾಡಿ ಅವರು ಊರಿನಲ್ಲಿ ಇದ್ದಾರೋ ಇಲ್ಲವೋ ಎಂದು ತಿಳಿದುಕೊಂಡು ಇಲ್ಲದೆ ಇದ್ದವರನ್ನು ಕೈಬಿಡುವ ತೀರ್ಮಾನ ತೆಗೆದುಕೊಳ್ಳುತ್ತಾರೆ.
ಮಕ್ಕಳನ್ನು ನೋಡಲು ಬಿಡಲಿಲ್ಲವೆಂದು ಪತ್ನಿ, ಮಕಳನ್ನೂ ಸೇರಿಸಿ ಮನೆಗೆ ಬೆಂಕಿ ಹಚ್ಚಿದ ಪತಿ
ಒಬ್ಬರ ಹೆಸರು ಎರಡೆರಡು ಕಡೆ ಸೇರಿರುತ್ತೆ ಎಂಬ ಕಾರಣಕ್ಕೆ ಅವೆಲ್ಲವನ್ನೂ ಪರಿಶೀಲನೆ ಮಾಡಿ ಮತದಾರರ ಪಟ್ಟಿ ತಯಾರಿಸುವಂತೆ ಎಲೆಕ್ಷನ್ ಕಮಿಷನ್ ಸ್ಪಷ್ಟವಾಗಿ ಸೂಚನೆ ಕೊಟ್ಟಿರುವುದರಿಂದ ಪರಿಷ್ಕರಣೆ ಮಾಡುತ್ತಿದ್ದಾರೆ. ಎಲ್ಲಾ ಹಂತದಲ್ಲೂ ನಕಲಿ ಓಟಗಳನ್ನು ತಡೆಯುವ ಕೆಲಸವನ್ನು ಎಲೆಕ್ಷನ್ ಕಮಿಷನ್ ಮಾಡುತ್ತಿದೆ. ಇದರ ಬಗ್ಗೆ ಕೆಪಿಸಿಸಿ ಅವರು ಮಾತನಾಡುವುದರ ಬಗ್ಗೆ ಅರ್ಥವಿಲ್ಲ.ಚುನಾವಣೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿರುವುದಿಲ್ಲ ಚುನಾವಣೆ ಬಗ್ಗೆ ಭಯ ಶುರುವಾಗಿರಬೇಕು ಅದಕ್ಕಾಗಿ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಮಧುಸ್ವಾಮಿ ವ್ಯಂಗ್ಯವಾಡಿದರು.