ವೋಟರ್ ಐಡಿ ಅಕ್ರಮ ಆರೋಪ : ಕೇಂದ್ರ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು

ಬೆಂಗಳೂರು: ಮತದಾರರ ಮಾಹಿತಿ ಅಕ್ರಮ ಸಂಗ್ರಹಿಸಿರುವ ವಿಚಾರವಾಗಿ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗ ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ದೂರು ಸಲ್ಲಿಸಿದರು. ಸರ್ಕಾರದ ವಿರುದ್ಧಕಾಂಗ್ರೆಸ್ ನಾಯಕರು ದೂರು ಸಲ್ಲಿಸಲು ಆಗಮಿಸಿದ ಹಿನ್ನೆಲೆ ಸ್ಥಳದಲ್ಲಿ ಪ್ರತಭಟನೆಗಳು ಆಗಬಹುದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆ ವಿಶೇಷ ಎಚ್ಚರಿಕೆ ವಹಿಸಿತ್ತು.

ಬೆಂಗಳೂರು 2025ರ ವೇಳೆಗೆ 175 ಕಿಮೀ ಮೆಟ್ರೋ ಸಂಪರ್ಕ ಹೊಂದಲಿದೆ : ಮೆಟ್ರೋ ರೈಲು ವ್ಯವಸ್ಥಾಪಕ ಅಂಜುಮ್ ಪರ್ವೇಜ್

ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿತ್ತು. ಕಾಂಗ್ರೆಸ್ ದೂರು ಸಲ್ಲಿಸಿದ ನಂತರ ಕೆಪಿಸಿಸಿ ಅಧ್ಯಕ್ಷ ಮಾತನಾಡಿ ಇದುವರೆಗೆ ಚುನಾವಣಾ ಅಕ್ರಮದಲ್ಲಿ ಭಾಗಿಯಾದವರನ್ನು ಅರೆಸ್ಟ್ ಮಾಡಿಲ್ಲ, ಯಾರೋ ಒಬ್ಬರನ್ನು ವಶ ಪಡಿಸಿಕೊಂಡರೆ ಆಗಲ್ಲ. ಅದರಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಬೇಕು ಅವರ ಮೇಲೆ ಎಫ್ ಐಆರ್ ದಾಖಲಿಸಬೇಕು. ಸರಿಯಾದ ಮಾರ್ಗದಲ್ಲಿ ತನಿಖೆಯಾಗಬೇಕು ಇದು ಕ್ರಿಮಿನಲ್ ಅಫೆನ್ಸ್  ಮತದಾನದ ಹಕ್ಕನ್ನು ಕಿತ್ತುಕೊಂಡಿದ್ದಾರೆ ಸಿಎಂ ಫೋನ್ ನಂಬರ್ ತೆಗೆಯಿರಿ ಅವರ ಹಿಂದಿರುವವರು ಎಲ್ಲರೂ ಆಚೆ ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೋಟರ್ ಐಡಿ ಅಕ್ರಮ ವಿಚಾರ : ಚಿಲುಮೆ ಮುಖ್ಯಸ್ಥ ರವಿಕುಮಾರ್ ಪತ್ನಿ, ಕೃಷ್ಣೇಗೌಡ ಪತ್ನಿ ಪೊಲೀಸರ ವಶ

ಇಂದು ನಿಶ್ಚಿತಾರ್ಥ ಮಾಡಿಕೊಂಡ ಅಮೀರ್ ಖಾನ್ ಪುತ್ರಿ ಇರಾ ಖಾನ್ ಮತ್ತು ನೂಪುರ್ ಶಿಖರೆ

About The Author