- Advertisement -
ಕರ್ನಾಟಕ ಮೂವೀಸ್ : ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ರವಿಬೋಪಣ್ಣ ಸಿನಿಮಾ ಫಸ್ಟ್ ಲುಕ್ ಇಂದು ರಿಲೀಸ್ ಆಗಿದೆ. ದೃಶ್ಯ ಸಿನಿಮಾ ಈ ಹಿಂದೆ ಭಾರೀ ಸಂಚಲ ಸೃಷ್ಟಿಸಿದ್ದು, ಈ ಸಿನಿಮಾ ಎಷ್ಟೋ ಜನರಿಗೆ ಸ್ಪೂರ್ತಿಯಾಗಿ ಸಕಾರಾತ್ಮಕ, ನಕಾರಾತ್ಮಕ ಕೆಲಸಕ್ಕೆ ಕಾರಣವಾಗಿತ್ತು. ಇದೀಗ ಅದರ ಮುಂದುವರೆದ ಭಾಗ ರವಿಬೋಪಣ್ಣ ದೃಶ್ಯ -2..
“ಸಿಡಿಯೋ ಕಿಡಿಗಳು ಎಷ್ಟೇ ಇದ್ರು, ಬೆಂಕಿ ಬೆಂಕಿನೇ” ಅನ್ನೊ ಸಾಲು ರವಿಬೋಪಣ್ಣ ದೃಶ್ಯ-2 ಪೋಸ್ಟರ್ ನ ಹೈಲೈಟ್ಸ್. ಈ ಸಿನಿಮಾ ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಇತಿಹಾಸ ನಿರ್ಮಿಸುತ್ತೆ ಅನ್ನೋದು ಕ್ರೇಜಿ ಸ್ಟಾರ್ ಅಭಿಮಾನಿಗಳ ಭರವಸೆ. ಏನೇ ಆಗಲಿ ನಮ್ಮ ನಿಮ್ಮೆಲ್ಲರ ಪ್ರೀತಿಯ ಕ್ರೇಜಿಸ್ಟಾರ್ ಗೆ ಈ ಸಿನಿಮಾ ದೊಡ್ಡ ಯಶಸ್ಸು ತಂದು ಕೊಡಲಿ ಅಂತ ಆಶಿಸೋಣ.
- Advertisement -