ಸತ್ತ ಪ್ರಾಣಿ ತಿನ್ನಲು ರಣಹದ್ದುಗಳು ಕಿತ್ತಾಡೋ ಹಾಗೇ ಕಿತ್ತು ತಿನ್ನಲು ಕಚ್ಚಾಡುತ್ತಿದ್ದಾರೆ: ಗೋವಿಂದ ಕಾರಜೋಳ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷ ದೇಶದಲ್ಲಿ ಸುಮಾರು‌ 60 ವರ್ಷ ಆಡಳಿತ ನಡೆಸಿದೆ. 60 ವರ್ಷದ ಆಡಳಿತದಲ್ಲಿ ಕಾಂಗ್ರೆಸ್ 60 ಲಕ್ಷ ಕೋಟಿ ಹಗರಣ ಮಾಡಿದೆ. ಹಗಣರ ಮಾಡಿ ಸಿಕ್ಕಿ ಹಾಕಿಕೊಂಡು ಕೆಲವರು ಜೈಲಿನಲ್ಲಿದ್ದಾರೆ. ಇನ್ನೊಂದಿಷ್ಟು ಜನ ಬೇಲ್ ಮೇಲೆ ಹೊರಗಿದ್ದಾರೆ ಎಂದು ಕಾರಜೋಳ ಟಾಂಗ್ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹದಿನಾಲ್ಕು ತಿಂಗಳ ಗತಿಸುತ್ತಾ ಬಂದಿದೆ. ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಮಂತ್ರಿಗಳು ಸೇರಿ ಶಾಸಕರು ಸರ್ಕಾರವನ್ನು ಕಿತ್ತು ತಿನ್ನುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಅನ್ನುವುದು ಸತ್ತ ಪ್ರಾಣಿ ಆಗಿದೆ. ಸತ್ತ ಪ್ರಾಣಿ ತಿನ್ನಲು ರಣಹದ್ದುಗಳು ಕಿತ್ತಾಡೋ ಹಾಗೇ ಕಿತ್ತು ತಿನ್ನಲು ಕಚ್ಚಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ವಾಲ್ಮೀಕಿ ನಿಗಮದ 187 ಕೋಟಿ ಹಗರಣ ವಿಚಾರದ ಬಗ್ಗೆ ಮಾತನಾಡಿರುವ ಗೋವಿಂದ ಕಾರಜೋಳ, ದಲಿತರ ಕಲ್ಯಾಣಕ್ಕಾಗಿ ಸಂವಿಧಾನ ಆಶಯದಂತೆ ವಾಲ್ಮೀಕಿ ನಿಗಮ ಸ್ಥಾಪಿಸಲಾಗಿದೆ. ನಿಗಮಕ್ಕೆ ವಿಶೇಷ ಅನುದಾನವನ್ನು ಸರ್ಕಾರಗಳು ನೀಡುತ್ತಾ ಬರುತ್ತಿವೆ. ನಿಗಮಕ್ಕೆ ಬಂದಿರೋ ಅನುದಾನವನ್ನು ದಲಿತರ ಏಳಿಗಾಗಿ ಮಾತ್ರ ಖರ್ಚು ಮಾಡಬೇಕು. ಅದನ್ನು ಬಿಟ್ಟು ಓಟ್ ಬ್ಯಾಂಕ್ ರಾಜಕಾರಣದ ಗ್ಯಾರಂಟಿಗಳೆಗೆ ಅಲ್ಲ. ದಲಿತರ ಶಿಕ್ಷಣ, ಮನೆ, ಉದ್ಯೋಗಕ್ಕೆ ಸೇರಿ ಅವರಿಗೆ ಜಮೀನ ಕೊಡಿಸಲು ನಿಗಮದ ಅನುದಾನ ಬಳಕೆ ಆಗಬೇಕು. ಆದರೆ ಅದೂ ಇಂದಿನ‌ ಕಾಂಗ್ರೆಸ್ ಸರ್ಕಾರದಲ್ಲಿ ಆಗುತ್ತಿಲ್ಲ. ವಾಲ್ಮೀಕಿ ನಿಗಮದ ಹಗರಣದ ಹಣ ಸರ್ಕಾರಣ ಖಜಾನೆ ಯಂಯ ಹಗಲು ದರೋಡೆ‌ಯಾಗಿದೆ. 187 ಕೋಟಿ ಹಣ ಬೇನಾಮಿ ಅಕೌಂಟಗಳಿಗೆ ಟ್ರಾನ್ಸಫರ್ ಮಾಡಿ ಚುನಾವಣೆಗೆ, ಕಾಂಗ್ರೆಸ್ ಪಕ್ಷಕ್ಕೆ ಬಳಸಿಕೊಳ್ಳಲಾಗಿದೆ.ಇದರ ನೈತಿಕ ಹೊಣೆ ಹತ್ತು ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು. ವಾಲ್ಮೀಕಿ ನಿಗಮದ ಹಗರಣ ತನಿಖೆ ನಿಷ್ಪಕ್ಷಪಾತವಾಗಿ ಆಗಬೇಕು ಎಂದು ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ಸಿಎಂ ಕುರ್ಚಿ ಹಗ್ಗಜಗ್ಗಾಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕಾರಜೋಳ, ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದುವರೆಯುವ ಲಕ್ಷಣಗಳು ಕಾಣುತ್ತಿಲ್ಲ. ಅವರ ಪಕ್ಷದ ಶಾಸಕರೇ ಸರ್ಕಾರದ ಬಗ್ಗೆ ಅಸಮಧಾನ ಹೊಂದಿದ್ದಾರೆ. ಯಾವೊಂದು ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ‌. ಯಾವ ಪುರುಷಾರ್ಥಕ್ಕೆ ನಾವು ಅಧಿಕಾರಕ್ಕೆ ಬಂದ್ವಿ ಅಂತಿದ್ದಾರೆ. ಮಂತ್ರಿಗಳ ಅಸಹಕಾರದ ಬಗ್ಗೆ ಅನೇಕ‌ಶಾಸಕರು ಅಸಮಧಾನ‌ ಹೊರಹಾಕಿದ್ದಾರೆ. 50ಶಾಸಕರು ಗುಂಪಾಗಿ ಚಟುವಟಿಕೆ ಆರಂಭಿಸಿರೋ ಹೋಗೆ ಆಡುತ್ತಿದೆ. ಯಾವುದೇ ಸಮಯದಲ್ಲಿ‌ ಈ ಸರ್ಕಾರ ಅಪಾಯ ಎದುರಾಗಬಹುದು ಎಂದಿದ್ದಾರೆ.

ಡಿಸಿಎಂ‌ ಡಿಕೆಶಿ ಸಿಎಂ ಸಿದ್ದರಾಮಯ್ಯ ಸಿಎಂ ಖುರ್ಚಿ ಹಗ್ಗಜಗ್ಗಾಟ ವಿಚಾರದ ಬಗ್ಗೆ ಮಾತನಾಡಿದ ಅವರು,  ಸರ್ಕಾರ ಸ್ಥಾಪನೆಯ ಸಮಯದಲ್ಲಿಯೇ ಸಿಎಂ‌ ಹಗ್ಗಜಗ್ಗಾಟ ನಡೆದಿತ್ತು. ಇದೇ ವಿಚಾರಕ್ಕೆ ಸರ್ಕಾರ ರಚನೆಗೂ ವಿಳಂಬವಾಗಿತ್ತು. ಈಗ‌ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ‌ ನಾಲ್ಕು ಗುಂಪುಗಳಾಗಿವೆ. ದಲಿತ,ವೀರಶೈವ, ಡಿಕೆಶಿ, ಹಾಗೂ ಅಹಿಂದಾ ಸಿದ್ದರಾಮಯ್ಯ ಗುಪುಗಳಾಗಿವೆ. ಗುಂಪು ಗುಂಪಾಗಿ ಕಾಂಗ್ರೆಸನಲ್ಲಿ ಕಚ್ಚಾಟದಿಂದ ಸರ್ಕಾರದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಆಡಳಿತದಲ್ಲಿ ಬಿಗಿ ಇಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಕೊಲೆ, ಸುಲಿಗೆ, ಕಳ್ಳತನ, ಹಲ್ಲೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿವೆ. ಈ ಸರ್ಕಾರಕ್ಕೆ ಅಪಾಯ ಇರುವುದು ಸತ್ಯ ಎಂದು ಕಾರಜೋಳ ಭವಿಷ್ಯ ನುಡಿದಿದ್ದಾರೆ.

About The Author