Health tips:
ಶರೀರದಲ್ಲಿ ಇರುವಂತಹ ಅನಾವಶ್ಯಕ ಕೊಬ್ಬನ್ನು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕರಗಿಸಿ ತೂಕವನ್ನು ಕಡಿಮೆ ಮಾಡುವಂತಹ ವಿಧಾನ ಮಾರ್ಗವನ್ನು ತಿಳಿದು ಕೊಳ್ಳೋಣ .ಶರೀರದಲ್ಲಿ ಬೊಜ್ಜು ಮತ್ತು ಕೊಬ್ಬು ಯಾವರೀತಿ ಸಂಗ್ರಹಣೆ ಯಾಗುತ್ತದೆ, ಎಂದು ನಾವು ಮೊದಲು ತಿಳಿದು ಕೊಳ್ಳಬೇಕು, ನಂತರ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ವೈಜ್ಞಾನಿಕವಾಗಿ ಇದಕ್ಕೆ ಕಾರಣ ಅಜಿರ್ಣವೆನ್ನಬಹುದು,ಹೌದು ಅಜೀರ್ಣ ಹೇಗೆ ಕಾರಣವೆಂದರೆ ನಾವು ತಿಂದಿರುವ ಆಹಾರ ಎರಡು ಭಾಗಗಳಾಗಿ ವಿಗಂಡನೆ ಯಾಗುತ್ತದೆ, ಇದು ಸರಿಯಾಗಿ ವಿಂಗಡಣೆಯಾದಾಗ ಮಾತ್ರ ಶರೀರದ ಬೆಳವಣಿಗೆ ಸಹಜವಾಗಿರುತ್ತದೆ ,ಈ ರೀತಿ ಯಾಗದೆ ಅರ್ಧ ಜೀರ್ಣವಾದರೆ ಕೊಬ್ಬು ಉತ್ಪತ್ತಿ ಯಾಗುತ್ತದೆ .ಕೊಬ್ಬು ಉತ್ಪತ್ತಿಯಾಗಲು ಇನ್ನೊಂದು ಕಾರಣವೆಂದರೆ ಮಾನಸಿಕ ಒತ್ತಡ, ಅನಿಯಮಿತವಾದ ಜೀವನ ಶೈಲಿ ,ನಿದ್ರಾ ಹೀನತೆ ಸಮಸ್ಯೆ ಹಾಗೂ ದೈನಂದಿನ ಆಹಾರ ಅಭ್ಯಾಸಗಳು ಸರಿಯಾಗಿ ಇಲ್ಲದೆ ಇರುವ ಕಾರಣ ಅಜೀರ್ಣ ಉಂಟಾಗುತ್ತದೆ .
ಮೊದಲು ಕೊಬ್ಬನ್ನು ಕರಗಿಸುವುದಕ್ಕೆ ನೀವು ಜೀರ್ಣಗ ವ್ಯವಸ್ಥೆಯನ್ನು ವೃದ್ಧಿ ಪಡಿಸಬೇಕು. ಕೊಬ್ಬನ್ನು ನೀವು ಮನೆಯಲ್ಲೇ ಕರಗಿಸಿ ಕೊಳ್ಳಬೇಕು ಎಂದರೆ ಮೊದಲು ಕಬ್ಬು ಸಂಗ್ರಹಣೆ ಮಾಡುವಂತಹ ಆಹಾರ ತಿನ್ನುವುದನ್ನು ಬಿಡಬೇಕು ,ಬದಲಾಗಿ ಹಣ್ಣು ,ತರಕಾರಿ ,ಸೊಪ್ಪುಗಳನ್ನು ಸೇವಿಸಬೇಕು ,ನಿಮಗೆ ಅಜೀರ್ಣದ ಜೊತೆ ಅಸಿಡಿಟಿ ಇದೆ ಎಂದರೆ ತರಕಾರಿ ಸೊಪ್ಪನ್ನು ತಪ್ಪದೆ ಬೇಯಿಸಿಕೊಂಡು ತಿನ್ನಬೇಕು .ಇದನ್ನು ಕ್ರಮವಾಗಿ ಒಂದು ತಿಂಗಳು ಮಾಡಬೇಕು ,ಇದರ ಜೊತೆಗೆ ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ,ಹೊಕ್ಕಳಿಗೆ ,ಸಾಸಿವೆಎಣ್ಣೆ ಅಥವಾ ಹರಳೆಣ್ಣೆ ಮಸಾಜ್ ಮಾಡಬೇಕು ,ನಂತರ ಹಾಟ್ ವಾಟರ್ ಬ್ಯಾಗ್ಅನ್ನು ಹೊಟ್ಟೆಯ ಮೇಲೆ ಇಟ್ಟು ಕೊಳ್ಳಬೇಕು. ನಂತರ ನಿಮ್ಮ ಶರೀರಕ್ಕೆ ಸ್ಟೀಮ್ ಕೊಡಬೇಕು.ಇದರಿಂದ ಶರೀರದಲ್ಲಿ ಸಂಗ್ರಹಣೆ ಯಾಗಿರುವಂತಹ ಕೊಬ್ಬು ಕರಗುತ್ತಾ ಹೋಗುತ್ತದೆ ,ಹಾಗೂ ರಕ್ತ ಸಂಚಾರ ಸುಗಮವಾಗುತ್ತದೆ .
ನಂತರ ರಾತ್ರಿ ಸಮಯದಲ್ಲಿಕೂಡ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಮಸಾಜ್ ಮಾಡಿ ಸ್ಟೀಮ್ ಕೊಡಬೇಕು ಇದನ್ನು ಉಟ್ಟಕ್ಕೆ 1ಗಂಟೆಯ ಮುಂಚಿತವಾಗಿ ಮಾಡಬೇಕು.ಇದರಿಂದ ಜೀರ್ಣಾಂ ವ್ಯವಸ್ಥೆ ಉತ್ತಮವಾಗುತ್ತದೆ ಹಾಗೂ ದೇಹದಲ್ಲಿ ಕೊಬ್ಬು ಸಂಗ್ರಹಣೆಯಾಗದೆ ಇರುವ ಹಾಗೆ ಇದು ತಡೆಗಟ್ಟುತ್ತದೆ.ಇದನ್ನು ಅನುಸರಿಸುವವರು ರಾತ್ರಿ 6ಗಂಟೆಯ ಮೇಲೆ ಊಟವನ್ನು ಮಾಡಬಾರದು ,ಹೀಗೆ ಸತತವಾಗಿ ಒಂದು ತಿಂಗಳು ಮಾಡುವುದರಿಂದ ನೀವು ಬೊಜ್ಜಿನ ಸಮಸ್ಯೆಗಳನ್ನು ಸಂಪೂರ್ಣವಾಗಿ ತೊಡೆದುಹಾಕಬಹುದು .
ಜೀರ್ಣಾಂಗ ವ್ಯವಸ್ಥೆ ಸುಧಾರಿಸಬೇಕು ಎಂದರೆ ಮನೆಯಲ್ಲಿ ನೀವು ಹಸಿಶುಂಠಿ ,ನಿಂಬೆರಸ ,ಸ್ವಲ್ಪ ಹಿಂಗು ,ಈ ಎಲ್ಲಾ ಮಿಶ್ರಣವನ್ನು ಸೇರಿಸಿ ಅದ್ಕಕೆ 50ml ನೀರನ್ನು ಸೇರಿಸಿ , ಮುಂಜಾನೆ ಮತ್ತು ಸಾಯಂಕಾಲ ಸೇವಿಸಬೇಕು ಒಂದು ತಿಂಗಳು ಸೇವಿಸ ಬೇಕು .ಹೀಗೆ ಮಾಡುವುದರಿಂದ ದೇಹದಲ್ಲಿ ಕೊಬ್ಬು ಕಡಿಮೆಯಾಗುತ್ತಾ ಹೋಗುತ್ತದೆ.