ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಹೃದಯದ ಕಾಳಜಿ ಬಗ್ಗೆ ಜನರಲ್ಲಿ ಅರಿವು ಜಾಸ್ತಿಯಾಗ್ತಿದೆ. ಸಂಘ ಸಂಸ್ಥೆಗಳಿಂದ ಹೃದಯದ ಬಗ್ಗೆ ಅರಿವು ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಸದ್ಯ, ಜನಪ್ರಿಯ ಆಸ್ಪತ್ರೆ, ಹಾಸನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಐಎಂಎ ಹಾಸನ ಆಶ್ರಯದಲ್ಲಿ, ವಿಶ್ವ ಹೃದಯ ದಿನದ ಅಂಗವಾಗಿ ವಾಕಥಾನ್ ಆಯೋಜಿಸಲಾಗಿತ್ತು. ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಮೇಯರ್ ಗಿರೀಶ್ ಚನ್ನವೀರಪ್ಪ, ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಭಾಗಿಯಾಗಿದ್ರು.
ನಗರದ ಹೇಮಾವತಿ ಪ್ರತಿಮೆ ಬಳಿ ಸಂಸದ ಶ್ರೇಯಸ್ ಪಟೇಲ್ ಚಾಲನೆ ನೀಡಿದರು. ಬಳಿಕ ಮಾತನಾಡಿದ್ದು, ಹೃದಯ ಬಡಿತ ಇದ್ದರಷ್ಟೇ ನಾವು ಬದುಕಲು ಸಾಧ್ಯ. ಎಷ್ಟೇ ಒತ್ತಡದ ಕೆಲಸ ಇದ್ರೂ ಪ್ರತಿಯೊಬ್ಬರು, ಹೃದಯದತ್ತ ಗಮನ ಕೊಡಿ ಎಂದು ಸಲಹೆ ಕೊಟ್ಟಿದ್ದಾರೆ.
ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿದ್ದು, ಕೇವಲ ಆಸ್ಪತ್ರೆ ಅಭಿವೃದ್ಧಿಯಾದ್ರೆ ಸಾಕಾಗುವುದಿಲ್ಲ. ಜನಸಾಮಾನ್ಯರ ಆರೋಗ್ಯ ಕೂಡ ಉತ್ತಮವಾಗಿರಬೇಕು. ಹೃದಯ ಚೆನ್ನಾಗಿದ್ರೆ ಆರೋಗ್ಯ ಚೆನ್ನಾಗಿರುತ್ತೆ. ವ್ಯಕ್ತಿ ಚೆನ್ನಾಗಿದ್ರೆ, ದೇಶದ ಆರೋಗ್ಯವೂ ಸದೃಢವಾಗುತ್ತದೆ. ಇಂತಹ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಹೃದಯದ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದ್ರು.