Thursday, November 21, 2024

Latest Posts

ಈ ಹಿಂದೆ ಸಿಎಂ ಆಗಿದ್ದಾಗ ಮಲಗಿದ್ರಾ..?: ಹೆಚ್.ಡಿ.ಕುಮಾರಸ್ವಾಮಿ ಮೇಲೆ ಪ್ರಾಸಿಕ್ಯುಷನ್ ನಡೆಸುವ ಬಗ್ಗೆ ಬೆಲ್ಲದ್ ಪ್ರಶ್ನೆ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್, ಮೂಡಾ ಹಗರಣದಲ್ಲಿ ದಾಖಲೆಗಳಿಗೆ ವೈಟ್ನರ್ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದ ಮೇಲೆ ಅದರ ಮಾರನೇ ದಿನವೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹೆಲಿಕಾಪ್ಟರ್ ತೆಗೆದುಕೊಂಡು ಮೈಸೂರಿಗೆ ಹೋಗಿದ್ದಾರೆ. ಮೈಸೂರಿನಲ್ಲಿರುವ ದಾಖಲೆಗಳನ್ನ ತೆಗೆದುಕೊಂಡು ಅವರು ಹೋಗಿದ್ದಾರೆ. ಅವುಗಳನ್ನ ಮುಚ್ಚಿ ಇಟ್ಟಿದ್ದಾರೆ, ಈ ಬಗ್ಗೆ ತನಿಖೆಯಾಗಬೇಕು. ಅದರಲ್ಲೇ ಎರಡು ದಾಖಲೆ ಮೈಸೂರಿನಲ್ಲಿ ಉಳಿದಿದ್ದವು, ಅವು ಈಗ ಜನರಿಗೆ ಹಾಗೂ ಮಾದ್ಯಮಕ್ಕೆ ಸಿಕ್ಕಿವೆ. ಆ ದಾಖಲೆಗೆ ವೈಟ್ನರ್ ಹಚ್ಚಿ ಗದ್ದಲ ಮಾಡುವ ಕೆಲಸ ಮಾಡಲಾಗಿದೆ. ನನಗೆ ನ್ಯಾಯಾಲಯದ ಮೇಲೆ ಸಂಪೂರ್ಣ ಭರವಸೆ ಇದೆ, ರಾಜ್ಯಪಾಲರ ನಿಲುವನ್ನು ೨೯ ಕ್ಕೆ ನ್ಯಾಯಾಲಯ ಎತ್ತಿ ಹಿಡಿಯಲಿದೆ. ರಾಜ್ಯಪಾಲರ ಬಳಿ ಬಂದ ದೂರಿನ ಮೇಲೆ ಅವತು ತನಿಖೆಗೆ ಆದೇಶ ಮಾಡಿದ್ದಾರೆ. ತನ್ನ ಮೇಲೆ ತನಿಖೆ ಬೇಡ ಎಂದು ಹೇಳಲು ಸಿಎಂಗೆ ಹಕ್ಕಿಲ್ಲ. ಸಿಎಂ ತಪ್ಪು ಮಾಡಿದಾಗ ಅವರ ಮೇಲೆ ತನಿಖೆ ಆಗಬಾರದು ಎಂದು ಹೇಳಲು ಕ್ಯಾಬಿನೆಟಗೆ ಹಕ್ಕಿಲ್ಲ. ಸಾಂವಿಧಾನಿಕ ಪ್ರಮುಖರಾದ ರಾಜ್ಯಪಾಲರು ತನಿಖೆಗೆ ಆದೇಶ ಮಾಡಿದ್ದಾರೆ. ಆ ಆದೇಶ ಕೋರ್ಟ್ ಎತ್ತಿ ಹಿಡಿಯಲಿದೆ, ಸಿಎಂಗೆ ರಾಜೀನಾಮೆ ಕೊಡೊದು ಬಿಟ್ಟು ಬೇರೆ ದಾರಿ ಹಾಗೂ ಉಪಾಯ ಇಲ್ಲ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿ ಮೇಲೆ ಪ್ರಾಸಿಕ್ಯುಷನ್ ನಡೆಸಲು ಮನವಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಬೆಲ್ಲದ್, ಯಾವುದೇ ಹಗರಣ‌ ಇದ್ದರೂ ತನಿಖೆ ಮಾಡಲಿ. ತನ್ನ ಮೈಮೇಲೆ ಹಗರಣ ಬಂದ ಮೇಲೆ ಬೇರೆ ಹಗರಣ ಬಗ್ಗೆ ಮಾತಾಡೊದಲ್ಲ. ೨೦೧೩ ರಿಂದ ೧೮ ರವರೆಗೆ ಇವರೇ ಸಿಎಂ ಇದ್ದರು, ಈಗಲೂ ಇವರೇ ಸಿಎಂ ಇದ್ದಾರೆ. ಇಷ್ಟು ದಿನ ಇವರು ಮಲಗಿದ್ರಾ? ನಾವು ತನಿಖೆ ಮಾಡಲು ಹೇಳ್ತೆವೆ, ಯಾರು ಬೇಡಾ ಅಂದಿದ್ದು..? ಎಂದು ಅರವಿಂದ್ ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss