Tuesday, October 14, 2025

Latest Posts

ಗ್ರಾಮಕ್ಕೆ ಹರಿದು ಬಂದ ಕಾವೇರಿ..!

- Advertisement -

www.karnatakatv.net :ಚಾಮರಾಜನಗರ: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದ ನೀರೆತ್ತುವ ಘಟಕದಿಂದ ಕಾವೇರಿ ನೀರಾವರಿ ನಿಗಮದ ಯೋಜನೆಯಂತೆ ಕೊಳವೆ ಮೂಲಕ ನೀರು ಹರಿಸಲಾಗುತ್ತಿದೆ.

ಇಂದಿನಿಂದ ಪ್ರಾಯೋಗಿಕವಾಗಿ ಕಬಿನಿ ನದಿಯಿಂದ ಚಾಮರಾಜನಗರದ ಕೋಡಿಮೋಳೆ ಕೆರೆಗೆ ನೀರು ಹರಿಬಿಡಲಾಗ್ತಿದೆ. ನೀರು ಸರಾಗವಾಗಿ ಹರಿಯುತ್ತಿದೆಯೋ ಇಲ್ಲವೋ ಎನ್ನುವ ಬಗ್ಗೆ ನೀರಾವರಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ಈ ಮೂಲಕ  ನೀರು ಹರಿಸವಂತೆ ಸಾಕಷ್ಟು ವರ್ಷಗಳಿಂದ ಮನವಿ ಮಾಡಿಕೊಂಡಿದ್ದ ಈ ಇಲ್ಲಿನ ಸುತ್ತಮುತ್ತಲ ಗ್ರಾಮಗಳ ಜನರ ಕನಸು ಇಂದು ನನಸಾಗಿದೆ. ಅಲ್ಲದೆ ರೈತರ ಪಾಲಿನ ಆಶಾ ಕಿರಣವಾಗಿದೆ.

ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

- Advertisement -

Latest Posts

Don't Miss