Sunday, September 8, 2024

Latest Posts

Water problem: ಸಕಾಲಕ್ಕೆ ಮಳೆಯಿಲ್ಲದೆ ಬತ್ತಿಹೋಗುತ್ತಿರುವ ಕೆರೆಗಳು: ಆತಂಕದಲ್ಲಿ ಗ್ರಾಮಸ್ಥರು..!

- Advertisement -

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಕಿರೆಸೂರು ಗ್ರಾಮದ ಬಳಿ ಇರುವ ಕೆರೆಯಲ್ಲಿ ನೀರು ಬತ್ತಿ ಹೋಗಿತ್ತಿರುವ ಕಾರಣ ಸುತ್ತಮುತ್ತಲಿನ ಹದಿನಾಲ್ಕು ಗ್ರಾಮಗಳಿಗೆ ನೀರಿನ ಆಹಾಕಾರ ಬಂದೊದಗುವ ಆತಂಕ ಎದುರಾಗಿದೆ. ಇದಲ್ಲದೆ ಕುಂದಗೋಳ ತಾಲೂಕಿನ ಹದಿನಾಲ್ಕು ಗ್ರಾಮಗಳಿಗೆ ಇದೇ ಕೆರೆಯಿಂದ ನೀರು ಸರಭರಾಜು ಆಗುತ್ತಿರುವ ಕಾರಣ ಗ್ರಾಮದ ಜನರಿಗೆ ಭಯ ಉಂಟಾಗಿದೆ.

ಇದು ಸುಮಾರು 20 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾದ ಕೆರೆ ಇದ್ದರೂ ಈ ಬಾರಿ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಭಯ ಎದುರಾಗಿದೆ. ಇನ್ನು ಈ ಕೆರೆಗೆ ಮಲಪ್ರಭಾ ನದಿಯ ಕಾಲುವೆ ಮೂಲಕ ನೀರು ಹರಿಸಿ ಕೆರೆಯನ್ನು ತುಂಬಿಸಲಾಗುತ್ತಿತ್ತು. ಆದರೆ ಈ ಬಾರಿ ಹುಬ್ಬಳ್ಳಿ ಭಾಗದಲ್ಲಿ ಮಳೆ ಕಡಿಮೆ ಆದ ಕಾರಣ ಕೆರೆಯಲ್ಲಿರುವ ನೀರು ಬತ್ತಿ ಹೋಗುತ್ತಿದೆ. ಒಂದು ವರ್ಷಕ್ಕೆ  ಮೂರು ಬಾರಿ ಕಾಲುವೆಯಿಂದ ನೀರನ್ನು ಕೆರೆಗೆ ಹರಿಬಿಡಲಾಗುತ್ತಿತ್ತು. ಆದರೆ ಈ ಬಾರಿ ಮಳೆಯ ಅಭಾವದಿಂದ ನೀರನ್ನು ಹರಿಸಿಲ್ಲ.

ಇನ್ನು ಸುಮಾರು 15 ದಿನಗಳವರೆಗೆ ಪೂರೈಸುವಷ್ಟು ಮಾತ್ರ ನೀರು ಶೇಖರಣೆ ಮಾಡಲಾಗಿದ್ದು 15 ದಿನಗಳ ನಂತರ ಗ್ರಾಮಗಳಿಗೆ ನೀರಿಲ್ಲದೆ ಆಹಾಕಾರ ಸೃಷ್ಟಿಯಾಗುವ ಭೀತಿ ಉಂಟಾಗಿದೆ. ಕೆರೆಗೆ ನೀರು ಹರಿಸುವ ಬಗ್ಗೆ ಕೆಪಿಡಿ ಸಭೆಯಲ್ಲಿಯೂ ಪ್ರಸ್ತಾಪ ಮಾಡಲಾಗಿತ್ತು.

ಕೆರೆ ನಿರ್ಮಾಣ ಆದಾಗಿನಿಂದ ಇದೇ  ಮೊದಲ ಬಾರಿಗೆ ಕೆರೆ ಬತ್ತುವ ಆತಂಕ ಎದುರಾಗಿದೆ.

ಒಂದೆಡೆ ನೀರು ಖಾಲಿಯಾಗುವ ಆತಂಕ ಇದ್ರೆ, ಇನ್ನೊಂದೆಡೆ ಕೊಳಚೆ ನೀರು ಸರಬರಾಜು ಆರೋಪ ಕೇಳಿಬರುತ್ತಿದೆ. ಸಂಪೂರ್ಣ ಕೊಳಚೆಯಿಂದ ಕೂಡಿದ್ದು ಕೆರೆಯಲ್ಲಿ ಬಿಯರ್ ಬಾಟಲ್ ಸೇರಿದಂತೆ ಕೊಳಚೆ ತಾಂಡವಾಡುತ್ತಿವೆ.ನೀರನ್ನು ಸರಿಯಾಗಿ ಶುದ್ಧಗೊಳಿಸದೇ ಗ್ರಾಮಗಳಿಗೆ ನೀರು ಸರಬರಾಜು ಮಾಡುತ್ತಿದ್ದಾರೆ ಇಷ್ಟು ದೊಡ್ಡ ಕೆರೆಗೆ ಕೇವಲ ಒಂದೆ ಫಿಲ್ಟರ್ ಮಾಡುವ ಟ್ಯಾಂಕ್ ಅನ್ನು ಅಳವಡಿಸಲಾಗಿದ್ದರೂ ಒಂದೇ ಟ್ಯಾಂಕ್ಗೆ ಕೆರೆಉ ನೀರನ್ನೆಲ್ಲ ಶುದ್ದಿಕರಿಸುವ ಸಾಮಥ್ರ್ಯವಿದೆ ಅಂತ ಅಧಿಕಾರಿಗಳು ಹೇಳುತ್ತಾರೆ,

ಲ್ಯಾಬೋರೆಟರಿಯಲ್ಲಿ ನೀರಿನ ಗುಣಮಟ್ಟ ಚೆನ್ನಾಗಿದೆ ,ಆದರೂ ಲ್ಯಾಮ್ ಲ್ಯಾಕ್ ಕ್ಲಾರಿಫೈಯರ್ ಹಾಕಲು 2.50 ಕೋಟಿ ಕೂಡ ಸ್ಯಾಕ್ಷನ್ ಆಗಿದೆ. ಆದಷ್ಟು ಬೇಗ ಅದನ್ನು ಕೂರಿಸುವ ಕೆಲಸ ಮಾಡ್ತೇವೆ ಅಂತಾರೆ ಸಂಬಂಧ ಪಟ್ಟ ಅಧಿಕಾರಿಗಳು  ನೀರು ಸರಬರಾಜಿಗೆ ಕುಂದಗೋಳದ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಂದ ಜನಪ್ರತಿನಿದಿನಗಳಿಗೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ನೀರು ಬಿಡಲು ಭರವಸೆ ಸಹಿತ ನೀಡಿದ ಜನಪ್ರತಿನಿದಿನಗಳು ಹಾಗೂ ಅಧಿಕಾರಿಗಳು ಆದಷ್ಟು ಬೇಗ ನೀರು ಸರಬರಾಜು ಮಾಡಬೇಕು ಎಂಬುವ ಆಗ್ರಹ ಗ್ರಾಮಸ್ಥರದ್ದು ಅದರ ಜೊತೆಗೆ ಶುದ್ಧ ನೀರು ಸರಬರಾಜು ಮಾಡಬೇಕು ಎಂಬ ಆಗ್ರಹ ಕೊಳಚೆ ನೀರು ಗ್ರಾಮಗಳಿಗೆ ಬರುತ್ತಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು.  ಈ ಬಗ್ಗೆ ಜನಪ್ರತಿನಿದಿನಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಗ್ರಾಮಸ್ಥರ ಅಳಲುನ್ನು ತೋಡಿಕೊಂಡರು.

ಗಂಗಾದೇವಿ ನಿಜವಾಗಿಯೂ ಪಾಪನಾಶಿನಿಯಾ..?

Siddaramaiah: ಕಾಂಗ್ರೆಸ್ ಪಕ್ಷದ ಗೆಲುವು ಬಿಜೆಪಿಯ ಭಯಕ್ಕೆ ಕಾರಣ

ಹುಲ್ಲಿನ ಬಣ್ಣ ನೀಲಿ ಎಂದ ಕತ್ತೆ, ಇಲ್ಲ ಹಸಿರು ಎಂದ ಚಿರತೆ.. ಮುಂದೇನಾಯ್ತು..?

- Advertisement -

Latest Posts

Don't Miss