ಹುಬ್ಬಳ್ಳಿ: ತಾಲೂಕಿನ ಶಿರಗುಪ್ಪಿ ಗ್ರಾಮದ ಜನರ ನೀರಿನ ಭವಣೆ ನೀಗಿಸಲು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಟ್ಯಾಂಕ್ ನಿರ್ಮಾಣ ಮಾಡಿದೆ. ಆದರೆ ಉದ್ಘಾಟನೆಗೂ ಮುನ್ನವೇ ಶಿಥಿಲಗೊಂಡಿರುವುದು ನಿಜಕ್ಕೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ.
ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ದೊಡ್ಡ ಪ್ರಮಾಣದ ನೀಟಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಆದರೆ ಈ ಟ್ಯಾಂಕ್ ಇನ್ನೂ ಉದ್ಘಾಟನೆ ಕೂಡ ಆಗಿಲ್ಲ.ಇಲ್ಲಿ ಅಸಲಿ ವಿಷಯವೇನೆಂದರೆ ಟ್ಯಾಂಕ್ ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಸಂಪೂರ್ಣ ಭಾಗ ತಂಪು ಹಿಡಿದು ಜನರಲ್ಲಿ ಆತಂಕವನ್ನುಂಟು ಮಾಡಿದೆ. ಲಕ್ಷಾಂತರ ರೂಪಾಯಿ ಯೋಜನೆಗೆ ಗುತ್ತಿಗೆದಾರರ ಅಲಕ್ಷ್ಯ ಜನರ ಜೀವದ ಜೊತೆಗೆ ಆಟ ಆಡುವಂತಾಗಿದೆ. ಹೌದು.. ಎಲ್ಲೆಂದರಲ್ಲಿ ಸೋರುತ್ತಿರುವ ನೀರು, ಸಂಪೂರ್ಣ ಭಾಗ ತಂಪಿನಿಂದ ಶಿಥಿಲಗೊಂಡಿದ್ದು, ಯಾವ ಸಮಯದಲ್ಲಿ ಆದರೂ ಕೂಡ ಬಿದ್ದು ಹೋಗುವುದಂತೂ ಖಂಡಿತ. ಅಲ್ಲದೇ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಸಾರ್ವಜನಿಕರ ಹಣವನ್ನು ಹೀಗೆ ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.
ಒಟ್ಟಿನಲ್ಲಿ ಇಂತಹದೊಂದು ಅವ್ಯವಸ್ಥೆ ಶಿರಗುಪ್ಪಿ ಗ್ರಾಮದಲ್ಲಿ ತಲೆಯೆತ್ತಿದ್ದು, ಜಿಲ್ಲಾಡಳಿತ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಇಂತಹ ಅವ್ಯವಸ್ಥೆ ವಿರುದ್ಧ ಸೂಕ್ತ ಕ್ರಮಗಳನ್ನು ಜರುಗಿಸುವ ಮೂಲಕ ಕಳಪೆ ಕಾಮಗಾರಿಯಿಂದ ಜನರ ಜೀವದ ಜೊತೆಗೆ ಆಟ ಆಡುವ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು ಮಾಡಬೇಕಿದೆ.
Athani: ರಮೇಶ್ ಜಾರಕಿಹೊಳಿ ಆರೋಪಕ್ಕೆ ಟಾಂಗ್ ಕೊಟ್ಟ ಶಾಸಕ ಲಕ್ಷ್ಮಣ್ ಸವದಿ..!
Cobra : ನಾಗರಹಾವಿಗೆ ಡೀಸೆಲ್ ಎರಚಿದಾತನಿಗೆ ಸಂಕಷ್ಟ..?! ತುಳುನಾಡಿನಲ್ಲಿ ದೈವ ಶಕ್ತಿ ಮತ್ತೆ ಸಾಬೀತು..!