ಬಳ್ಳಾರಿ : ಈ ಬಾರಿ ಸಕಾಲಕ್ಕೆ ಮಳೆ ಬಾರದೆ ಅನ್ನದಾತ ಕಂಗಾಲಾಗಿದ್ದಾನೆ. ಇನ್ನು ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿಯೂ ಮುಂಗಾರು ಕೈಕೊಟ್ಟಿದ್ದು ರೈತರು ಬೆಳೆದಿರುವ ಮೆಣಸಿನಕಾಯಿ ಹತ್ತಿ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಹೌದು ಸ್ನೇಹಿತರೇ ಈಬಾರಿ ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು ಗಣಿ ನಾಡು ಬಳ್ಳಾರಿ ಭಾಗದ ಜನರು ವೇದಾವತಿ ನದಿ ದಡದಲ್ಲಿ ಹಾಗೂ ಕಾಲುವೆಯ ಕೊನೆ ಭಾಗದಲ್ಲಿ ರೈತರು ಬೆಳೆ ಬೆಳೆದಿದ್ದು ಈಗಾಗಲೆ ಶೇಕಡಾ 60 ರಷ್ಟು ಬೆಳೆ ಕೈಗೆ ಬಂದಿದೆ. ಆದರೆ ಇನ್ನುಳಿದ 40 ರಷ್ಟು ಬೆಳೆ ಉಳಿಸಿಕೊಳ್ಳಲು ಬೆಳೆಗಳಿಗೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ.
ಬಾಡುತ್ತಿರುವ ಬೆಳೆಗಳನ್ನು ರಕ್ಷಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹರಿಸಲಾಗುತ್ತಿದೆ. ಆದರೆ ಒಂದು ಎಕರೆಗೆ ಟ್ಯಾಂಕರ್ ಮೂಲಕ ನೀರು ಹರಿಸಲು ಕನಿಷ್ಟವೆಂದರೂ 10 ರಿಂದ 15 ಸಾವಿರ ಹಣ ಖರ್ಚಾಗುತ್ತದೆ ಎಂದು ನಿರಾಶರಾಗದ್ದಾರೆ.
ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಪರಭಾರೆ :ನಗರಸಭೆ ನಡೆ ಖಂಡಿಸಿ ಪ್ರತಿಭಟನೆ..!
ಕನ್ನಡ ಧ್ವಜವನ್ನು ಸರ್ಕಾರಿ ಕಛೇರಿಗಳ ಮೇಲೆ ಹಾರಿಸಲು ಒತ್ತಾಯಿಸಿ ಪತ್ರ; ಭೀಮಪ್ಪ ಗಡಾದ್..!