- Advertisement -
ಹಾಸನ : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ನಡೆಯುತಿದ್ದು ಕಾಂಕ್ರೀಟ್ ಕ್ಯೂರಿಂಗ್ ಮಾಡಲು ಟ್ಯಾಂಕರ್ ನಲ್ಲಿ ನೀರನ್ನು ತರಲಾಗುತ್ತಿತ್ತು. ಈ ವೇಳೇಯಲ್ಲಿ ಟ್ಯಾಂಕರ್ ನ ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಕಾರ್ಮಿಕನ ಮೆಲೆ ಬಿದ್ದ ಕಾರಣ ಕಾರ್ಮಿಕ ಮೃತಪಟ್ಟಿದ್ದಾನೆ.
ಹಾಸನ ಹೊರವಲಯದ ಬುವನಹಳ್ಳಿ ಬೈಪಾಸ್ ಬಳಿ ರಸ್ತೆ ಕೆಲಸ ಮಾಡುತ್ತಿರುವ ದೇವರಾಜ ಮತ್ತು ಅಯ್ಯಪ್ಪ 22 ಎನ್ನುವ ವ್ಯಕ್ತಿಗಳು ರಾಯಚೂರಿನ ಗೋನವಾರಹಳ್ಳಿ ಗ್ರಾಮದವರು. ಬ್ರೇಕ್ ಫೇಲ್ ಆಗಿರುವ ಕಾರಣ ಚಾಲಕನ ನಿಯಂತ್ರಣ ತಪ್ಪಿದಂತಹ ಟ್ಯಾಂಕರ್ ಏಕಾಏಕಿ ಈ ಇಬ್ಬರ ಕಾರ್ಮಿಕರ ಮೆಲೆ ಬಿದ್ದಿದ್ದರ ಪರಿಣಾಮ ಅಯ್ಯಪ್ಪ ಎನ್ನುವ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಹಾಗೂ ದೇವರಾಜ ಎನ್ನುವವರ ಕಾಲು ತುಂಡಾಗಿದೆ.
ಸ್ಥಳಕ್ಕೆ ಭೇಟಿನೀಡಿದಂತಹ ಸಂಚಾರಿ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
- Advertisement -