ವಿಷ ಸೇವಿಸಿದ ವಾಟರ್ ಮ್ಯಾನ್ – ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಪತ್ರಕರ್ತ..!

www.karnatakatv.net :ನಂಜನಗೂಡು :ಮೈಸೂರಿನ ನಂಜನಗೂಡಿನಲ್ಲಿ ವಿಷ ಕುಡಿದು ನರಳುತ್ತಿದ್ದ ವಾಟರ್ ಮ್ಯಾನ್ ನನ್ನು ಆಸ್ಪತ್ರೆಗೆ ಕರೆದೊಯ್ಯೋ ಮೂಲಕ ಪತ್ರಕರ್ತರೊಬ್ಬರು ಮಾನವಿಯತೆ ಮೆರೆದಿದ್ದಾರೆ.


ನಂಜನಗೂಡು ತಾಲೂಕಿನ ನೇರಳೆ ಗ್ರಾಮ ಪಂಚಾಯ್ತಿಯಲ್ಲಿ ಈ ಘಟನೆ ನಡೆದಿದ್ದು, ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿರೋ ಕುಮಾರಸ್ವಾಮಿ ಸದ್ಯ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. 2016ರಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷರು ಕುಮಾರಸ್ವಾಮಿಯನ್ನು ಕೆಲಸದಿಂದ ವಜಾಗೊಳಿಸಿದ್ರು. ಬಳಿಕ ಕೆಲಸದಲ್ಲಿ ಮುಂದುವರಿಯುವಂತೆ ಕೋರ್ಟ್ ಆದೇಶಿಸಿತ್ತು. ಆದ್ರೆ ಇದರ ಹೊರತಾಗಿಯೂ ಕುಮಾರಸ್ವಾಮಿಯನ್ನು ಮರುನೇಮಕ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಬೇಸತ್ತು ಗ್ರಾಮ ಪಂಚಾಯ್ತಿ ಕಚೇರಿ ಮುಂದೆಯೇ ಕುಮಾರಸ್ವಾಮಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನು ವಿಷ ಸೇವಿಸಿ ನರಳಾಡುತ್ತಿದ್ದ ಆತನನ್ನು ಗಮನಿಸಿದ ಪತ್ರಕರ್ತ ರೇವಣ್ಣ ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಕುಮಾರಸ್ವಾಮಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆತನ ಸ್ಥಿತಿ ಗಂಭೀರವಾಗಿದೆ ಅಂತ ತಿಳಿದುಬಂದಿದೆ.

ಪ್ರಸಾದ್, ಕರ್ನಾಟಕ ಟಿವಿ- ಮೈಸೂರು

About The Author