Technology News:
ಒಂದು ವೇಳೆ ವಾಟ್ಸ್ಆ್ಯಪ್ ಡಿಲೀಟ್ ಮಾಡಬೇಕು ಅಂದುಕೊಂಡಿದ್ದರೆ ಕೆಲ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು. ಅಂದಹಾಗೆ ವಾಟ್ಸ್ಆ್ಯಪ್ ಖಾತೆಯಲ್ಲಿನ ಮಾಹಿತಿಯನ್ನು ಡಿಲೀಟ್ ಮಾಡುವುದಕ್ಕೆ ೯೦ ದಿನಗಳ ಕಾಲ ಸಮಯ ತೆಗೆದುಕೊಳ್ಳಲಾಗುತ್ತದೆ. ಇಲ್ಲಿದೆ ನೋಡಿ ವಾಟ್ಸ್ಆ್ಯಪ್ ಅನ್ನು ಡಿಲೀಟ್ ಮಾಡುವ ಸುಲಭ ವಿಧಾನ ,ನಿಮ್ಮ ಆಂಡ್ರಾಯ್ಡ್ ಸ್ಮರ್ಟ್ಫೋನ್ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ.ಇನ್ನಷ್ಟು ಆಯ್ಕೆಗಳನ್ನು ಟ್ಯಾಪ್ ಮಾಡಿ, ನಂತರ ಸೆಟ್ಟಿಂಗ್ಗಳಿಗೆ ಹೋಗಿ.ಸೆಟ್ಟಿಂಗ್ಸ್ನಲ್ಲಿ ಅಕೌಂಟ್ ಮೇಲೆ ಕ್ಲಿಕ್ ಮಾಡಿ ಡಿಲೀಟ್ ಮೈ ಅಕೌಂಟ್ ಆಯ್ಕೆ ಒತ್ತಿ.ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಡಿಲೀಟ್ ಮೈ ಅಕೌಂಟ್ ಸೆಲೆಕ್ಟ್ ಮಾಡಿ.ಡ್ರಾಪ್ಡೌನ್ನಲ್ಲಿ ನೀವು ಅಕೌಂಟ್ ಅನ್ನು ಏಕೆ ಡಿಲೀಟ್ ಮಾಡುತ್ತೀರಿ ಎಂಬುದಕ್ಕೆ ಕಾರಣ ನೀಡಿ.ಈಗ ನಿಮ್ಮ ವಾಟ್ಸ್ಆ್ಯಪ್ ಅಕೌಂಟ್ ಡಿಲೀಟ್ ಆಗುತ್ತಿದೆ. ನಂತರ ಎಲ್ಲ ಮೆಸೇಜ್ ಡಿಲೀಟ್ ಆಗುತ್ತದೆ.ವಾಟ್ಸ್ಆ್ಯಪ್ ಡಿಲೀಟ್ ಮಾಡಿದರೆ ಎಲ್ಲ ಗ್ರೂಪ್ನಿಂದ ನೀವು ಹೊರಬರುತ್ತೀರಿ.
ಇದೀಗ ಭಾರತಕ್ಕೆ ಕಾಲಿಟ್ಟಿದೆ ಬಹುನಿರೀಕ್ಷಿತ ರಿಯಲ್ ಮಿ 9 4G ಸ್ಮಾರ್ಟ್ ಫೋನ್




