Friday, November 22, 2024

Latest Posts

Whatsapp : ವಾಟ್ಸಾಪ್ ನಲ್ಲಿ ಹಾರ್ಟ್​ ಎಮೋಜಿ ಕಳುಹಿಸೋ ಮೊದಲು ಎಚ್ಚರ..! ಇದು ಶಿಕಾರ್ಹ ಅಪರಾಧ..?!

- Advertisement -

Technology News : ವಾಟ್ಸಾಪ್ ಇರಲಿ ಇಲ್ಲ ಫೇಸ್ ಬುಕ್ ಇರಲಿ ಯಾವುದೇ ಸಾಮಾಜಿಕ ಜಾಲತಾಣವೇ ಇರಲಿ ಸಾಮಾನ್ಯವಾಗಿ ನಮ್ಮ ಪ್ರೀತಿ ಪಾತ್ರರಿಗೆ   ನಾವು ಹಾರ್ಟ್​ ಸಿಂಬಲ್ ಎಮೋಜಿ ಕಳಿಸೋದು  ಕಾಮನ್ ಆದ್ರೆ ಇನ್ನು ಮುಂದೆ ಇಂತಹ ಸಿಂಬಲ್ ಕಳಿಸೋ ಮುಂಚೆ ಸ್ವಲ್ಪ ಹುಷಾರಾಗಿರಿ ಇಂತಹ ಇಮೋಜಿ ಕಳಿಸೋದ್ರಿಂದ ನಿಮಗೆ ಸಂಕಷ್ಟವೂ ಕಾದಿದೆ ಅನ್ನೋ ವಿಚಾರದ ಬಗ್ಗೆ ನೀವು ತಿಳಿದುಕೊಂಡಿರಲೇಬೇಕು. 

ವಾಟ್ಸಾಪ್ ಅಥವಾ ಇತರ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಗೆ ಹಾರ್ಟ್‌ ಸಿಂಬಲ್‌ ಇರುವ ಅಥವಾ ಹೃದಯದ ಇಮೋಜಿಯನ್ನು ಕಳಿಸಿದ್ರೆ ನೀವು ಜೈಲು ಶಿಕ್ಷೆಗೊಳಗಾಗಬಹುದು. ಇದು, ಶಿಕ್ಷಾರ್ಹ ಅಪರಾಧವಾಗಿದೆ. ಹೌದು ನಿಜ ಆದ್ರೆ ಹೆದರೋ ಅವಶ್ಯಕತೆ ಇಲ್ಲ ಯಾಕಂದ್ರೆ ಈ ನಿಯಮ ನಮ್ಮ ದೇಶದ್ದು ಅಲ್ಲ. ಆದರೂ, ನೀವು ಈ ದೇಶಗಳಿಗೆ ಹೋದಾಗ ಅಥವಾ ಅಲ್ಲಿ ವಾಸ ಮಾಡ್ತಿದ್ರೆ ಈ ನಿಯಮವನ್ನು ಪಾಲನೆ ಮಾಡ್ಲೇಬೇಕು. ಇಸ್ಲಾಮಿಕ್‌ ದೇಶ ಕುವೈತ್‌ನಲ್ಲಿ ವಾಟ್ಸಾಪ್ ಅಥವಾ ಇತರ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಗೆ ಹೃದಯದ ಇಮೋಜಿ ಕಳುಹಿಸುವುದನ್ನು ಈಗ ಕುವೈತ್‌ನಲ್ಲಿ ದುಷ್ಕೃತ್ಯಕ್ಕೆ ಪ್ರಚೋದಿಸುವ ಅಪರಾಧವೆಂದು ಪರಿಗಣಿಸಲಾಗಿದೆ. ಆಶ್ಚರ್ಯ ಆದ್ರೂ ಇದು ನಿಜ.

ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ. ಕುವೈತ್ ವಕೀಲರಾದ ಹಯಾ ಅಲ್ ಶಲಾಹಿ ಅವರ ಪ್ರಕಾರ, ಈ ಅಪರಾಧಕ್ಕೆ ಶಿಕ್ಷೆಗೊಳಗಾದವರು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬಹುದು. ಅಲ್ಲದೆ, 2,000 ಕುವೈತ್ ದಿನಾರ್‌ಗಳನ್ನು ಮೀರಿದ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಅದೇ ರೀತಿ, ಮತ್ತೊಂದು ಮುಸಲ್ಮಾನ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಸಹ ವಾಟ್ಸಾಪ್‌ನಲ್ಲಿ ‘ಕೆಂಪು ಹೃದಯ’ ಇಮೋಜಿಗಳನ್ನು ಕಳುಹಿಸುವುದು ಜೈಲು ಶಿಕ್ಷೆಗೆ ಕಾರಣವಾಗಬಹುದು.

ಸೌದಿ ಕಾನೂನಿನ ಪ್ರಕಾರ, ಈ ಕೃತ್ಯದ ತಪ್ಪಿತಸ್ಥರು 1,00,000 ಸೌದಿ ರಿಯಾಲ್‌ಗಳ ದಂಡದೊಂದಿಗೆ ಎರಡರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು.

ವಾಟ್ಸಾಪ್‌ನಲ್ಲಿ ಕೆಂಪು ಹೃದಯ ಕಳುಹಿಸುವುದನ್ನು ದೇಶದ ನ್ಯಾಯವ್ಯಾಪ್ತಿಯಲ್ಲಿ “ಕಿರುಕುಳ” ಎಂದು ಅರ್ಥೈಸಬಹುದು ಎಂದು ಸೌದಿ ಸೈಬರ್ ಕ್ರೈಮ್ ತಜ್ಞರ ಹೇಳಿಕೆ. ಇನ್ನು, ಈ ಬಗ್ಗೆ ಸೌದಿ ಅರೇಬಿಯಾದ ಆಂಟಿ-ಫ್ರಾಡ್ ಅಸೋಸಿಯೇಷನ್‌ನ ಸದಸ್ಯ ಅಲ್ ಮೊಟಾಜ್ ಕುಟ್ಬಿ ಹೇಳಿರುವುದು ಹೀಗೆ.. “ಆನ್‌ಲೈನ್ ಸಂಭಾಷಣೆಯ ಸಮಯದಲ್ಲಿ ಕೆಲವು ಚಿತ್ರಗಳು ಮತ್ತು ಅಭಿವ್ಯಕ್ತಿಗಳನ್ನು ಬಳಸಿದರೆ, ಈ ಬಗ್ಗೆ ನೊಂದ ವ್ಯಕ್ತಿ ಮೊಕದ್ದಮೆ ಹೂಡಿದರೆ ಕಿರುಕುಳದ ಅಪರಾಧವಾಗಿ ಬದಲಾಗಬಹುದು” ಎಂದು ಸೌದಿ ಅರೇಬಿಯಾ ಕಾಣೂನಿನ ಬಗ್ಗೆ ವಿವರವಾಗಿ ಹೇಳಿಕೆ  ಕೂಡಾ ನೀಡಿದ್ದಾರೆ.

Gyanavapi: ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿದ ಅಲಹಾಬಾದ್ ಹೈ ಕೋರ್ಟ್

Rahul Gandhi : ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡ ರಾಗಾ..?!

DK Shivakumar : “ಇಂಡಿಯಾ”ಗೆ ಕನಿಷ್ಟ 20 ಲೋಕಸಭೆ ಸೀಟುಗಳನ್ನು ಗೆಲ್ಲಿಸಿ ಕೊಡುತ್ತೇವೆ : ಡಿಸಿಎಂ ಡಿ.ಕೆ. ಶಿವಕುಮಾರ್

- Advertisement -

Latest Posts

Don't Miss