Technology News:
ವಾಟ್ಸ್ ಆಪ್ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ ಕಂಪೆನಿ. ಹೌದು ವಾಟ್ಸಾಪ್ ಇದೀಗ ದಿನದಿಂದ ದಿನಕ್ಕೆ ವಿಶಿಷ್ಟವಾದಂತಹ ಫೀಚರ್ ಗಳೊಂದಿಗೆ ಹೊರಬರುತ್ತಿದೆ. ಹಾಗೆಯೇ ಇದೀಗ ಬಳಕೆದಾರರಿಗೆ ಮತ್ತೊಂದು ಚಿಭಿನ್ನ ಫೀಚರ್ ನೀಡಿದೆ ವಾಟ್ಸಾಪ್.ಇನ್ನು ವಾಟ್ಸಾಪ್ ನಲ್ಲಿ ಈ 3 ರೀತಿಯ ಬದಲಾವಣೆಗಳನ್ನು ಕಾಣಬಹುದಾಗಿದೆ.
1 ವೀಡಿಯೋ ಚಾಟ್ ಗಳಲ್ಲಿ ಅವತಾರ:
ವೀಡಿಯೋ ಎಡಿಟಿಂಗ್ ಪೀಚರನ್ನು ಕೂಡಾ ವಾಟ್ಸ್ಆಪ್ ಬಳಕೆದಾರರಿಗೆ ನೀಡುತ್ತಿದೆ. ವೀಡಿಯೋ ಚಾಟ್ ಮೂಲಕ ಇದೀಗ ಬಳಕೆ ದಾರರು ತಮ್ಮದೇ ಕಾರ್ಟೂನ್ ಗಳನ್ನು ಪಾತ್ರವನ್ನು ಮಾಡಬಹುದು.ವೀಡಿಯೋ ಕಾಲ್ ಮೂಲಕ ನಿಮ್ಮದೇ ಆದ ಅವತಾರ್ ನ್ನು ಬಳಸಲು ಸಾಧ್ಯ.
2.ಕೆಪ್ಟ್ ಮೆಸೇಜಸ್ ಆಯ್ಕೆ:
ನಾವು ಡಿಲಿಟ್ ಮಾಡಿದಂತಹ ಮೆಸೇಜ್ ಗಳನ್ನು ಇನ್ನು ಸೇವ್ ಮಾಡಿಕೊಳ್ಳ ಬಹುದು. ಹೌದು ಡಿಲೀಟ್ ಮಾಡುವ ಮೊದಲು ನಾವು ಆ ಮೆಸೇಜ್ ಗಳನ್ನು ಇನ್ನು ಸೇವ್ ಮಾಡುವ ಕೆಪ್ಟ್ ಮೆಸೇಜ್ ಆಯ್ಕೆ ಸಧ್ಯದಲ್ಲೇ ವಾಟ್ಸಾಪ್ ನಲ್ಲಿ ಬರಲಿದೆ.
3.ಗ್ರೂಪ್ ನಿಂದ ಎಕ್ಸಿಟ್ ಆದವರು ಯಾರೆಂದು ತಿಳಿಯಬಹುದು:
ವಾಟ್ಸ್ ಆಪ್ ನಿಂದ ಯಾರು ಎಕ್ಸಿಟ್ ಆಗಿದ್ದಾರೆ ಎಂಬುವುದನ್ನು ಇದೀಗ ಸುಲಭವಾಗಿ ತಿಳಿಯಬಹುದಾಗಿದೆ. ಉಳಿದ ಸದಸ್ಯರಿಗೂ ಯಾರು ಎಕ್ಸಿಟ್ ಆಗಿದ್ದಾರೆ ಎಂದು ತಿಳಿಯಲು ಇದು ಸಹಾಯಕ. ಹಾಗೆಯೇ ಈ ಪ್ರಕ್ರಿಯೆ ತ್ವರಿತಗತಿಯಲ್ಲಿ ಇದೀಗ ಅಭಿವೃದ್ಧಿ ಹಂತದಲ್ಲಿದೆ.
ಹಿಂದುಳಿದ ವಿದ್ಯಾರ್ಥಿಗಳೇ ಗಮನಿಸಿ: ಅರಿವು ಶೈಕ್ಷಣಿಕ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಸಂಚಾರಿ ಪೊಲೀಸರಿಂದಲೇ ರಸ್ತೆಯಲ್ಲೇ ಹೆಲ್ಮೆಟ್ ಬಗ್ಗೆ ಜಾಗೃತಿ ಮಾಹಿತಿ..!