ವಾಟ್ಸ್ಯಾಪ್ ಕಾಲ್ ರೆಕಾರ್ಡ್ ಮಾಡುವುದು ಇನ್ನು ಸಾಧ್ಯ…!

Technology News:

ಸಾಮಾನ್ಯವಾಗಿ ವಾಟ್ಸ್​ಆ್ಯಪ್​ ಕರೆ ಬಂದಾಗ ಸ್ಪೀಕರ್ ಆನ್ ಮಾಡಿ, ಇನ್ನೊಂದು ಮೊಬೈಲ್ ಮೂಲಕ ರೆಕಾರ್ಡ್ ಮಾಡಬಹುದು. ಇತ್ತೀಚೆಗೆ ಬಿಡುಗಡೆ ಆಗಿರುವ ಬಹುತೇಕ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲಿ ಅಟೋಮ್ಯಾಟಿಕ್ ಕಾಲ್ ರೆಕಾರ್ಡ್ ಆಯ್ಕೆ ನೀಡಲಾಗುತ್ತಿದೆ. ಇದರಿಂದ ಬಳಕೆದಾರರಿಗೆ ತುಂಬಾ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ, ವಾಟ್ಸ್​ಆ್ಯಪ್​ನಲ್ಲಿ ಕರೆ ಬಂದರೆ ಅದು ರೆಕಾರ್ಡ್ ಮಾಡುವುದಿಲ್ಲ. ಪ್ರತಿ ತಿಂಗಳು ವಾಟ್ಸ್ಆ್ಯಪ್​ನಲ್ಲಿ ಸುಮಾರು100 ಬಿಲಿಯನ್ ಮೆಸೇಜ್​ಗಳು ಹರಿದಾಡುತ್ತಿವೆ. ಪ್ರತಿದಿನ 100 ಕೋಟಿಗೂ ಅಧಿಕ ಮಂದಿ ಕರೆ ಮಾಡುತ್ತಿದ್ದಾರೆ. ಆದರೇ ವಾಟ್ಸ್ ಆಪ್ ಕರೆಗಳನ್ನು ರೆಕಾರ್ಡ್ ಮಾಡಲು ಇಲ್ಲಿವರೆಗೂ ಯಾವುದೇ ಫೀಚರ್​ಗಳು ಬರಲಿಲ್ಲ. ಇದರಿಂದ ಹಲವು ಬಳಕೆದಾರರು ನಿರಾಶೆಗೊಳಗಾಗಿದ್ದರು. ಇತರೆ ಟ್ರಿಕ್ ಬಳಸಿ ವಾಟ್ಸ್ಆ್ಯಪ್ ಕರೆ ರೆಕಾರ್ಡ್ ಮಾಡುವ ಆಯ್ಕೆಯ ಬಗ್ಗೆ ಇಲ್ಲಿದೆ ಹೊಸ  ಟ್ರಿಕ್.

ಸಾಮಾನ್ಯವಾಗಿ ವಾಟ್ಸ್​ಆ್ಯಪ್​ ಕರೆ ಬಂದಾಗ ಸ್ಪೀಕರ್ ಆನ್ ಮಾಡಿ, ಇನ್ನೊಂದು ಮೊಬೈಲ್ ಮೂಲಕ ರೆಕಾರ್ಡ್ ಮಾಡಬಹುದು. ಆದರೆ ಇದಕ್ಕಾಗಿ ಎರಡು ಸ್ಮಾರ್ಟ್​ಫೋನ್​ ಇರುವುದು ಅವಶ್ಯ. ಇದಿಲ್ಲದಿದ್ದರೇ ಥರ್ಡ್ ಪಾರ್ಟಿ ಆ್ಯಪ್​ಗಳಲ್ಲಿ ಒಂದಾದ “ವಾಯ್ಸ್ ರೆಕಾರ್ಡರ್” ಬಳಸಬಹುದು.

Otter.Ai app ಕೂಡ ವಾಯ್ಸ್ ರೆಕಾರ್ಡ್​ಗೆ ಪರಿಣಾಮಕಾರಿಯಾಗಿದ್ದು, ರೆಕಾರ್ಡ್ ಬಟನ್ ಕ್ಲಿಕ್ ಮಾಡುವ ಮೂಲಕ ವಾಟ್ಸ್ಆ್ಯಪ್ ಕರೆಗಳನ್ನು ದಾಖಲಿಸಿಕೊಳ್ಳಬಹುದು. ಈ ಆ್ಯಪ್​ನ ವಿಶೇಷತೆಯೆಂದರೇ ವಾಯ್ಸ್ ಕರೆಗಳು Text ಮಾದರಿಯಲ್ಲಿ ರೂಪಾಂತರಗೊಳ್ಳುತ್ತದೆ. ಇದರ ಮೂಲಕ ಪ್ರತಿ ತಿಂಗಳು ಉಚಿತವಾಗಿ 600 ನಿಮಿಷ ಕರೆಗಳನ್ನು ರೆಕಾರ್ಡ್ ಮಾಡಬಹುದು.

ಇದರ ಹೊರತಾಗಿ ಗೂಗಲ್ ಪ್ಲೇ ಸ್ಟೋರ್​​ನಲ್ಲಿ ಹಲವು ವಾಯ್ಸ್ ಕಾಲ್ ರೆಕಾರ್ಡ್ ಗಳು ಲಭ್ಯವಿದೆ. ಇದರಲ್ಲಿ “ರೆಕಾರ್ಡ್ ವಾಟ್ಸ್ಆ್ಯಪ್ ಕಾಲ್” ಅತ್ಯುತ್ತಮವಾಗಿ ಬಳಕೆ ಸ್ನೇಹಿಯಾಗಿದೆ. ಇದರಲ್ಲಿ ಅಟೋಮ್ಯಾಟಿಕ್ ಆಗಿ ವಾಟ್ಸ್ಆ್ಯಪ್ ಕರೆಗಳು ರೆಕಾರ್ಡ್ ಆಗುವುದು ಮಾತ್ರವಲ್ಲದೆ, ಗೂಗಲ್ ಡ್ರೈವ್​ಗೂ ಅಪ್ಲೋಡ್ ಆಗುವುದು.ಈ  ರೀತಿಯಾಗಿ  ಇನ್ನು ವಾಟ್ಸ್ ಆ್ಯಪ್  ಕರೆಯನ್ನು ರೆಕಾರ್ಡ್  ಮಾಡಬಹುದು.

ವಿದೇಶದಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ನಂ.1…!

ಭಾರತದ ಪ್ರಮುಖ ಬಿಜೆಪಿ ನಾಯಕನ ಹತ್ಯೆಗೆ ಸ್ಕಚ್…!? ಆತ್ಮಾಹುತಿ ಬಾಂಬರ್ ಅಂದರ್

ಯುಕೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಸುನಾಕ್ ಅವರೇ ಟಾಪ್ ಹುದ್ದೆಗೆ ಸೂಕ್ತ ಅಭ್ಯರ್ಥಿ: ಗೋವ್

About The Author