Sunday, July 6, 2025

Latest Posts

Wayanad News: ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತ: ಕೊಚ್ಚಿ ಹೋದ ಶಾಲೆ

- Advertisement -

Kerala News: ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು, 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಇನ್ನೂರಕ್ಕೂ ಹೆಚ್ಚು ಜನ, ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ.

ಇನ್ನು ಗುಡ್ಡ ಕುಸಿದ ಜಾಗದಲ್ಲಿ ಶಾಲೆ ಕೊಚ್ಚಿ ಹೋಗಿದೆ. ಶಾಲೆ ಪೂರ್ತಿ ನೆಲಸಮವಾಗಿದ್ದು, ಚೂರಲ್‌ಮಲ್‌ನಲ್ಲಿ ಈ ಘಟನೆ ನಡೆದಿದೆ. ಇನ್ನು ಗುಡ್ಡ ಕುಸಿದ ಸ್ಥಳದಿಂದ ಮೃತದೇಹಗಳು ಚಾಲಿಯಾರ್ ನದಿ ಮೂಲಕ ಮಲಪ್ಪುರಂ ಜಿಲ್ಲೆಗೆ ಕೊಚ್ಚಿ ಹೋಗಿದೆ. ಹಾಗಾಗಿ ಮೃತದೇಹಗಳನ್ನು ಹುಡುಕಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಹೆಲಿಕ್ಯಾಪ್ಟರ್‌ಗಳನ್ನು ತರಿಸಲಾಗಿದ್ದು, ಹಾವಾಮಾನ ವೈಪರಿತ್ಯ ಕಾರಣದಿಂದಾಗಿ, ಏರ್‌ಲಿಫ್ಟಿಂಗ್‌ಗೆ ತೊಂದರೆಯಾಗುತ್ತಿದೆ. ಮುಂಡಕೈ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ದುರಂತಕ್ಕೆ ಸಿಲುಕಿದ್ದು, ಇದರಲ್ಲಿ ವಿದೇಶಿಗರು ಇರುವ ಶಂಕೆ ವ್ಯಕ್ತಪಡಿಸಲಾಗಿದೆ. ವಯನಾಡು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.

- Advertisement -

Latest Posts

Don't Miss