Wednesday, June 12, 2024

Latest Posts

ನಾವು ಸೋತರೂ ಒಳ್ಳೆ ಫೈಟ್ ಕೊಟ್ಟಿದ್ದೇವೆ: ಕಾಂಗ್ರೆಸ್ ಸೋಲಿನ ಬಗ್ಗೆ ಸಂತೋಷ್ ಲಾಡ್ ಮಾತು

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಕಾಂಗ್ರೆಸ್ ಸೋಲಿನ ಬಗ್ಗೆ ಹೇಳಿಕೆ ನೀಡಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ಫೈಟ್ ಇತ್ತು, ಇಲ್ಲಿ ಲಾಡ್ ಜೊತೆ ಫೈಟ್ ಅಂತಾ ಇರಲಿಲ್ಲ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ನಾನು ಅಷ್ಟೇ ಅಲ್ಲಾ ಶಾಸಕರಾದ ವಿನಯ ಕುಲಕರ್ಣಿ, ಕೊನರಡ್ಡಿ, ಪ್ರಸಾದ ಅಬ್ಬಯ್ಯ ಎಲ್ಲರೂ ಪದಾಧಿಕಾರಿಗಳು ಒಳ್ಳೆ ಫೈಟ್ ಕೊಟ್ಟಿದ್ದೇವೆ. ನಾವು ಸೋತರು ಒಳ್ಳೆ ಫೈಟ್ ಕೊಟ್ಟಿದ್ದೇವೆ ಎಂದು ಲಾಡ್ ಹೇಳಿದರು.

ನನ್ನ ಕ್ಷೇತ್ರದಲ್ಲೇ ಬಿಜೆಪಿಗೆ 30 ಸಾವಿರ ಲಿಡ್ ಆಗಿದೆ, ಕಳೆದ ಬಾರಿ 40 ಲಿಡ್ ಸಾವಿರ ಆಗಿತ್ತು. ಲೋಕಸಭಾ ಚುನಾವಣೆ ವೇಳೆ ಬಿಜೆಪಿಯೇ ಲಿಡ್ ಇರುತ್ತಿದೆ. ಜನ ಅವರಿಗೆ ಮತ ಹಾಕಿದ್ದಾರೆ ಎಂದರೆ ನಾವು ಒಪ್ಪಿಕೊಳ್ಳಬೇಕು. ಕರ್ನಾಟಕದಲ್ಲಿ ಹಾಗೂ ದೇಶದ ಹಲವು ಕಡೆ ಮೋದಿ ಅಲೇ ಆಗಿಲ್ಲ, ಇದು ಮಾಧ್ಯಮ ಅಲೆ ಮೇಲೆ ಬಂದಿದ್ದು. ಕಳೆದ ಬಾರಿಗೆ ಹಾಗು ಈ ಬಾರಿಗೆ ನಮ್ಮದೇ ಜಿಲ್ಲೆಯಲ್ಲಿ ನಾವು 11% ಹೆಚ್ಚು ಮತ ಪಡೆದಿದ್ದೇವೆ. ಹಾಗಾದ್ರೆ ಮೋದಿ ಅಲೇ ಎಲ್ಲಿದೆ..? ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.

ಇವರು ಮೋದಿ ಅವರ ಹೆಸರ ಮೇಲೆಯೇ ಮತ ಕೇಳಿದ್ದು. ಮೋದಿ ಅವರೇ ಒಂದುವರೆ ಲಕ್ಷ ಮತದಿಂದ ಗೆದ್ದಿದ್ದಾರೆ. ಭಾರತದ ಎರಡನೇ ಪ್ರಧಾನಿ ಇಷ್ಟು ಕಡಿಮೆ ಮತಗಳಿಂದ ಗೆದ್ದಿದ್ದು. ಚಂದ್ರಶೇಖರ್ ಅವರು ಆದ ಮೇಲೆ ಇವರೇ ಒಂದುವರೆ ಲಕ್ಷ ಮತಗಳಿಂದ ಗೆದ್ದವರು. 5 ಲಕ್ಷ ಮತಗಳಿಂದ ಗೆಲ್ಲುವವರು ಯುಪಿಯಲ್ಲೇ ಕಡಿಮೆ ಮತ ಬಂದಿವೆ. ಮೋದಿ ಅವರ ಕ್ಷೇತ್ರದಲ್ಲಿ ಅವರದೇ ಹೆಸರಿನ ಒಬ್ಬ ಚುನಾವಣೆಗೆ ನಿಲ್ಲುತಿದ್ದ. ಆದರೆ ಅವನಿಗೆ ನಿಲ್ಲೊಕೆ‌ ಕೊಡಲಿಲ್ಲ, ಅವನು ನಿಂತಿದ್ದರೆ ಮೋದಿ ಅವರ ಲಿಡ್ ಇನ್ನು ಕಡಿಮೆಯಾಗುತ್ತಿತ್ತು ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ದಾಖಲೆ ವೀರನಿಗೆ ಬೆಟ್ಟದಷ್ಟು ಸವಾಲು, ಕೇಳಬೇಕಿದೆ ಜನಸಾಮಾನ್ಯರ ಅಹವಾಲು..!

ಉಪಚುನಾವಣೆ ದಿನಾಂಕ ಘೋಷಣೆ

ದೊಡ್ಮನೆಯ ಕುಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ- ಯುವ ದಾಂಪತ್ಯದಲ್ಲಿ ಬಿರುಗಾಳಿ!

- Advertisement -

Latest Posts

Don't Miss