Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಕರ್ಕಶ ಶಬ್ದದ ಮೂಲಕ ಜನರ ಹಾಗೂ ಅವಳಿನಗರದ ಶಾಂತಿಗೆ ಭಂಗವನ್ನುಂಟು ಮಾಡುವ ಬೈಕ್ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಪಾಠ ಕಲಿಸುವ ಸದುದ್ದೇಶದಿಂದ 202 ಸೈಲೆನ್ಸರ್ ನಾಶ ಪಡಿಸಿದ್ದೇವೆ. ಈ ಕಾರ್ಯಾಚರಣೆ ನಿರಂತರವಾಗಿ ಇರಲಿದೆ. ಯಾರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೂ ಕಾನೂನು ಕ್ರಮವನ್ನು ಜರುಗಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಹೇಳಿದರು.
ಸೈಲೆನ್ಸರ್ ನಾಶಪಡಿಸಿದ ಬಳಿಕ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಸಿಟಿಯಲ್ಲಿ ಸಂಚಾರಿ ಕಾನೂನಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ಬಂದಿದ್ದೇವೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವವರಿಗೆ ಪಾಠ ಕಲಿಸುವ ಸದುದ್ದೇಶದಿಂದ ಧಾರವಾಡ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿಯೂ ಕೂಡ 202ಕ್ಕೂ ಹೆಚ್ಚಿನ 11 ಲಕ್ಷಕ್ಕೂ ಅಧಿಕ ಮೌಲ್ಯದ ಸೈಲೆನ್ಸರ್ ನಾಶ ಮಾಡಿದ್ದೇವೆ ಎಂದರು.
ಸಾರ್ವಜನಿಕರಿಗೆ ಕಿರಿಕಿರಿ ಮಾಡುವವರಿಗೆ ಬಿಸಿ ಮುಟ್ಟಿಸಿದ್ದೇವೆ. ವಾರ್ನಿಂಗ್ ಕೊಟ್ಟು, modify ಬಗ್ಗೆ ಬೈಕ್ ಸವಾರರಿಗೆ ಹಾಗೂ ಮೆಕ್ಯಾನಿಕ್ ಗಳಿಗೂ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ವಿದ್ಯಾನಗರ, ಗೋಕುಲ ರೊಡ್, ಕೇಶ್ವಾಪೂರದಲ್ಲಿಯೇ ಹೆಚ್ಚಾಗಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅವರು ಮಾಹಿತಿ ನೀಡಿದರು.