Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಸುದ್ದಿಗೋಷ್ಠಿ ನಡೆಸಿದ್ದು, ಕರ್ನಾಟಕದಲ್ಲಿ ಮೂರು ಉಪಚುನಾವಣೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆದಿದೆ. ಪಕ್ಷ ನನಗೆ ಶಿಗ್ಗಾಂವಿ ಕ್ಷೇತ್ರದ ವಿಚಾರವಾಗಿ ಮಾಹಿತಿ ಕೇಳಿದ್ರು. ನಾನು ಕ್ಷೇತ್ರ ಸುತ್ತಾಡಿದಾಗ ಮತ್ತೊಮ್ಮೆ ಬೊಮ್ಮಾಯಿ ಕುಟುಂಬಕ್ಕೆ ಅವಕಾಶ ಕೊಡಬೇಕು ಅನ್ನೋ ಕೂಗಿದೆ. ನನಗಿರೋ ಮಾಹಿತಿ ಪ್ರಕಾರ ಬೊಮ್ಮಾಯಿ ಅವರನ್ನು ದೆಹಲಿಗೆ ಕರೆದಿದ್ದಾರೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಇನ್ನು ಇದೇ ವೇಳೆ ಪರೋಕ್ಷವಾಗಿ ಬೊಮ್ಮಾಯಿ ಪುತ್ರನ ಪರ ಬೆಲ್ಲದ್ ಬ್ಯಾಟ್ ಬೀಸಿದ್ದು, ಮುರಗೇಶ ನಿರಾಣಿ ಟಿಕೆಟ್ ವಿಚಾರವಾಗಿ ನಿನ್ನೆ ಮಾತಾಡಿದ್ದಾರೆ. ಹಿಂದೆ ಅವರು ಟಿಕೆಟ್ ಪ್ರಯತ್ನ ಮಾಡಿದ್ದು ನಿಜ. ಜನರ ಅಪೇಕ್ಷೆ ಬೊಮ್ಮಾಯಿ ಕುಟುಂಬಕ್ಕೆ ಟಿಕೆಟ್ ಕೊಡಬೇಕು ಅನ್ನೋದು ಇದೆ. ಬೇರೆ ಉತ್ತಮ ಅಭ್ಯರ್ಥಿಗಳು ಇದ್ದಾರೆ, ಆದ್ರೆ ಜನರ ಅಪೇಕ್ಷೆ ಕುಟುಂಬದ ಪರವಾಗಿದೆ. ಕೊನೆಗೆ ಹೈಕಮಾಂಡ್ ತೀರ್ಮಾನ ಎಲ್ಲರೂ ಒಪ್ಪಬೇಕು. ಗೆಲ್ಲೋ ಸೂಕ್ತ ಅಭ್ಯರ್ಥಿ ಹೈಕಮಾಂಡ ತೀರ್ಮಾನ ಮಾಡತ್ತೆ. ಇವಾಗಲೂ ಬಸವರಾಜ್ ಬೊಮ್ಮಾಯಿ ಮಗನನ್ನ ಸ್ಪರ್ಧೆ ಮಾಡಬೇಕು ಅನ್ನೋ ಆಸೆ ಇಲ್ಲ. ಹೈಕಮಾಂಡ್ ಕೂಡಾ ಎಲ್ಲ ಆಯಾಮಗಳಲ್ಲಿ ಸರ್ವೆ ಮಾಡಿದೆ. ಕೋರ್ ಕಮೀಟಿಯಿಂದ ಮೂರ್ನಾಲ್ಕು ಹೆಸರು ಹೋಗಿರೋ ಮಾಹಿತಿ ಇದೆಎಂದು ಬೆಲ್ಲದ್ ಹೇಳಿದ್ದಾರೆ.
ಇನ್ನು ಚೆನ್ನಪಟ್ಟಣ ಅಭ್ಯರ್ಥಿ ಬಗ್ಗೆ ಮಾತನಾಡಿದ ಬೆಲ್ಲದ್, ಸಿ.ಪಿ.ಯೋಗೇಶ್ವರ್ ಅವರೇ ಅಲ್ಲಿನ ಅಭ್ಯರ್ಥಿಯಾಗಬೇಕು. ನಾವೆಲ್ಲರೂ ಯೋಗೇಶ್ವರ ಅವರೇ ಅಭ್ಯರ್ಥಿ ಮಾಡಬೇಕು ಅನ್ನೋ ಒತ್ತಾಯ ಮಾಡ್ತೇವೆ. ನಾವೆಲ್ಲ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡ್ತೀವಿ. ಅಂತಿಮವಾಗಿ ಕುಮಾರಸ್ವಾಮಿ ತೀರ್ಮಾನ.
ಯೋಗೇಶ್ವರ ಒಳ್ಳೆ ಕೆಲಸ ಮಾಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಯೋಗೇಶ್ವರ ಒಳ್ಳೆ ಕೆಲಸ ಮಾಡಿದ್ದಾರೆ. ಜನರ ಮನಸ್ಸಿನಲ್ಲಿ ಯೋಗೇಶ್ವರ ಅಭ್ಯರ್ಥಿ ಆಗಬೇಕು ಅನ್ನೋ ಆಸೆ ಇದೆ. ನಾವು ಗೆಲ್ಲಬೇಕು ಅಂದ್ರೆ ಯೋಗೇಶ್ವರ ಅವರಿಗೆ ಟಿಕೆಟ್ ಕೊಡಬೇಕು. ಬೇರೆ ಯಾರೆ ಆದರೂ ಚುನಾವಣೆ ಟಫ್ ಆಗತ್ತೆ ಎಂದು ಬೆಲ್ಲದ್ ತಮ್ಮ ಅನಿಸಿಕೆ ಹೇಳಿದ್ದಾರೆ.
ಹಳೇ ಹುಬ್ಬಳ್ಳಿ ಗಲಭೇ ಕೇಸ್ ವಾಪಸ್ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೆಲ್ಲದ್, ಬರೋ 25 ರಂದು ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡೋ ಪ್ಲ್ಯಾನ್ ಇದೆ. ಇನ್ನು ದಿನಾಂಕ ನಿಗದಿಯಾಗಿಲ್ಲ.
ಕೇಂದ್ರ ಸಚಿವ ಜೋಶಿ,ವಿಜಯೇಂದ್ರ,ಆರ್ ಅಶೋಕ,ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಹೋರಾಟ.
ಸುಮಾರು 25 ಸಾವಿರ ಮಂದಿ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಕೇಸ್ ವಾಪಸ್ ಪಡೆದಿದೆ. ಪೊಲೀಸ್ ಠಾಣೆ ಮೇಲೆ ಕಲ್ಲು ಹೊಡೆದವರಿಗೆ ಧರ್ಮದ ಮತಾಂಧತೆ ಇದೆ. ಕಾಂಗ್ರೆಸ್ ನವರಿಗೆ ಅವರಗಿಂತ ದೊಡ್ಡ ಅಂಧತ್ವ ಇದೆ. ಮತ ಬ್ಯಾಂಕ್ ನ ದೊಡ್ಡ ಅಂಧತ್ವ ಇದೆ. ವೋಟ್ ಬ್ಯಾಂಕ್ ನ ಅಂಧತ್ವ ಇದೆ ಎಂದು ಬೆಲ್ಲದ್ ಅಸಮಾಧಾನ ಹೊರಹಾಕಿದ್ದಾರೆ.
ಹಳೇ ಹುಬ್ಬಳ್ಳಿ ಗಲಭೇ ಕೇಸ್ ವಿಚಾರವಾಗಿ ದೊಡ್ಡ ಹೋರಾಟ ಮಾಡ್ತೀವಿ. ಸಿದ್ದರಾಮಯ್ಯ ನಾನು ದೇವರಾಜು ಅರಸು ರೀತಿ ಆಡಳಿತ ಕೊಡ್ತೀನಿ ಅಂತಿದ್ರು. ಈ ರೀತಿ ಸಿದ್ದರಾಮಯ್ಯ ಅನೇಕರಿಗೆ ಹೇಳಿದ್ರು. ಇದೀಗ ಅವರ ಆಡಳಿತ ನೋಡಿದ್ರೆ ಕರ್ನಾಟಕಕ್ಕೆ ಅತ್ಯಂತ ಆಡಳಿತ ಕೊಟ್ಟವರು ಸಿದ್ದರಾಮಯ್ಯ. ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ಇಳಿತಿವಿ ಅನ್ನೋ ಕಾರಣಕ್ಕೆ ತರಾತುರಿಯಲ್ಲಿ ನಿರ್ದಾರ ಮಾಡಿದ್ದಾರೆ. ದೇಶ ರಾಜ್ಯ ಹಾಳಾಗಿ ಹೋಗಲಿ ಅವರಿಗೆ ವೋಟ್ ಬ್ಯಾಂಕ್ ಬೇಕು ಎಂದು ಬೆಲ್ಲದ್ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿ ಸಮುದಾಯದ ಸ್ವಾಮೀಜಿ ಜೊತೆ ಸಿಎಮ್ ಮೀಟಿಂಗ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬೆಲ್ಲದ್,
ಅನೇಕ ದಿನಗಳಿಂದ ಮುಖ್ಯಮಂತ್ರಿಗಳ ಸಮಯ ಕೇಳಲಾಗಿತ್ತು. ಇವತ್ತು ಸಮಯ ಕೊಟ್ಟಿದ್ದಾರೆ. ಜಯ ಮೃತ್ಯುಂಜಯ ಸ್ವಾಮೀಜಿ ವಕೀಲರ ಜೊತೆ ಹೋಗಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಲಿ ನೋಡೋಣ. ಮುಖ್ಯಮಂತ್ರಿಗಳಿಗೆ ಮುಸ್ಲಿಂ ಸಮುದಾಯ ಬಿಟ್ಟು ಯಾವ ಸಮಾಜ ಕಾಣಲ್ಲ. ನಮಗೆ 2A ಕೊಡಬೇಕು ಎಂದ ಬೆಲ್ಲದ್. ಸಿದ್ದರಾಮಯ್ಯ ಅವರಿಗೆ ಬೇಕಾದವರ ಕಡೆಯಿಂದ ಕೋರ್ಟ್ ಗೆ ಹಾಕಿಸಿದ್ದಾರೆ. 2D ಬೇಡಾ ಅಂದ್ರೆ 2Aಕೊಡಲಿ ಎಂದು ಬೆಲ್ಲದ್ ಹೇಳಿದ್ದಾರೆ.