- Advertisement -
ಮುಂಬೈ: ಕುದುರೆ, ಕಾರ್, ಬುಲ್ಡೋಜರ್ ಆಯ್ತು. ಇದೀಗ ಇಲ್ಲೋಂದು ಜೋಡಿ ಮದುವೆ ಮೆರವಣಿಗೆಗೆ ನೀರಿನ ಟ್ಯಾಂಕರ್ ಬಳಸಿ ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ.
ಮಹಾರಾಷ್ಟದ ಈ ನವ ಜೋಡಿ ವಿಶಾಲ್ ಮತ್ತು ಅಪರ್ಣಾ ನೀರಿನ ಅವ್ಯವಸ್ಥೆ ಎತ್ತಿಹಿಡಿಯಲು ಟ್ಯಾಂಕರ್ ಬಳಸಿ ಅಚ್ಚರಿ ಮೂಡಿಸಿದ್ದಾರೆ. ಕೊಲ್ಹಾಪುರದಲ್ಲಿ ನೀರಿನ ಸಮಸ್ಯೆ ಅತೀಯಾಗಿರುವ ಹಿನ್ನೆಲೆ ಸ್ಥಳೀಯ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ.
ಹೀಗೆ ನೀರಿನ ಸಮಸ್ಯೆ ಅನುಭವಿಸುತ್ತಿರುವ ಸ್ಥಳೀಯರು ನೀರಿನ ಟ್ಯಾಂಕರ್‍ಗಳಿಗೆ ಅವಲಂಬಿತರಾಗಿದ್ದಾರೆ. ಆಡಳಿತ ಮಂಡಳಿಯೂ ನೀರಿನ ಸಮಸ್ಯೆ ಬಗೆಹರಿಯುವವರೆಗೂ ಹನಿಮೂನ್ ಹೋಗುವುದಿಲ್ಲ ಅಂತ ಇಬ್ಬರು ಪಣ ತೊಟ್ಟಿದ್ದಾರೆ.
- Advertisement -