ರಕ್ಷಣೆಗಾಗಿ ಶಸ್ತ್ರಾಸ್ತ್ರಗಳ ಅಗತ್ಯವಿದೆ; ಕಿಮ್ ಜಾಂಗ್ ಉನ್..!

www.karnatakatv.net: ಅಮೆರಿಕಾ ಮತ್ತು ದಕ್ಷಿಣ ಕೊರಿಯಾದಿಂದ ರಕ್ಷಣೆಯನ್ನು ಪಡೆಯಲು ನಮಗೆ ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ಕಿಮ್ ಜಾಂಗ್ ಉನ್ ವಿರೋಧಿಗಳ ವಿರುದ್ಧ ಗುಡುಗಿದ್ದಾನೆ

ಹೌದು.. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ಹೇಳಿದ್ದಾರೆ ಯಾಕೆಂದರೆ ಅಮೆರಿಕಾ ಮತ್ತು ದಕ್ಷಿಣ ಕೊರಿಯಾ ಶಾಂತಿ ಕದಡುವ ಪ್ರಯತ್ನ ಮಾಡುತ್ತಿವೆ. ಈ 2 ರಾಷ್ಟ್ರಗಳಿಂದ ತುಂಬಾ ಬೆದರಿಕೆ ಇದೆ ಆದರಿಂದ ನಮಗೆ ರಕ್ಷಣೆಯ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾರೆ. ಉತ್ತರ ಕೊರಿಯಾದ ನ್ಯೂಕ್ಲಿಯರ್ ಘಟಕಗಳು ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿದ್ದವು ಅಮೆರಿಕ ಸೇರಿದಂತೆ ಉತ್ತರ ಕೊರಿಯಾ ಶತ್ರು ರಾಷ್ಟ್ರಗಳ ಎದೆಯಲ್ಲಿ ಈ ಘಟನೆ ಸಂಚಲನ ಸೃಷ್ಟಿಸಿತ್ತು. ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡವಾಗಿದೆ. ಆದರೆ ಇಂತಹ ಹೊತ್ತಲ್ಲೇ ಉತ್ತರ ಕೊರಿಯಾ ಸರ್ವಾಧಿಕಾರಿ ಮತ್ತೆ ಅಮೆರಿಕ ಹಾಗೂ ದ.ಕೊರಿಯಾ ವಿರುದ್ಧ ಗುಡುಗಿದ್ದಾನೆ. ಅಲ್ಲದೆ ಅಮೆರಿಕ ಹಾಗೂ ದ.ಕೊರಿಯಾ ಶಸ್ತ್ರಾಸ್ತ್ರಗಳ ಮೂಲಕ ಶಾಂತಿಗೆ ಬೆದರಿಕೆ ಒಡ್ಡುತ್ತಿವೆ ಎಂದು ಕಿಮ್ ಆರೋಪಿಸಿದ್ದಾನೆ.

ತನ್ನ ಮೇಲೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಸೇರಿ ಹೇರಿರುವ ನಿರ್ಬಂಧಗಳು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ನ ರೊಚ್ಚಿಗೆಬ್ಬಿಸಿದೆ. ಎಷ್ಟುದಿನ ಅಂತಾ ಬಡತನದಲ್ಲೇ ಸಾಯೋದು.. ತಮ್ಮ ಬಗ್ಗೆ ಶತ್ರುಗಳಿಗೆ ಒಂದಷ್ಟು ಭಯ ಇರಲಿ ಅನ್ನೋ ರೀತಿ ಪದೇ ಪದೆ ಮಿಸೈಲ್ ಟೆಸ್ಟ್ ಮಾಡಿಸುತ್ತಿದ್ದಾನೆ ಇದಕ್ಕೆಲ್ಲ ಅವನ ತಂಗಿ ಕೂಡಾ ಸಾಥ್ ನೀಡುತ್ತಿದ್ದಾಳೆ ಇದರಿಂದ ಅಮೆರಿಕನ್ನರಿಗೆ ತಲೆನೋವು ಶುರುವಾಗಿದೆ.

About The Author