ರೈಲಿನಲ್ಲಿ ಹಸಿ ಗಾಂಜಾ ಪತ್ತೆ..!

www.karnatakatv.net :ಹುಬ್ಬಳ್ಳಿ : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಪ್ರಯಾಣಿಕರೋಬ್ಬರು ತಾವು  ಬಿಟ್ಟು ಹೋಗಿದ್ದ ಬ್ಯಾಗ್ ನಲ್ಲಿ ಬರೊಬ್ಬರಿ 1.12 ಲಕ್ಷ ರೂ . ಮೌಲ್ಯದ ಗಾಂಜಾ ಪತ್ತೆಯಾಗಿದೆ.

ಗುಂತಕಲ್ ರೈಲು ನಿಲ್ದಾಣದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಅಮರಾವತಿ ಎಕ್ಸಪ್ರೆಸ್ ರೈಲಿನಲ್ಲಿ  ಅಪರಿಚಿತ ಪ್ರಯಾಣಿಕ ರೈಲಿನಲ್ಲಿಯೇ ಬ್ಯಾಗ್ ಬಿಟ್ಟು ಇಳಿದಿದ್ದರ ಬಗ್ಗೆ ಪ್ರಯಾಣಿಕರು ಸಂಶಯ ವ್ಯಕ್ತಪಡಿಸಿ ಕರ್ತವ್ಯ ಟಿಟಿಐ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.ಇನ್ನೂ ತಕ್ಷಣವೇ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಬಂದ ನಂತರ ಬ್ಯಾಗ್‌ನ್ನು ಶ್ವಾನದಳ ಪರಿಶೀಲಿಸಿ ಬಳಿಕ ಪೊಲೀಸರು ಹಾಗೂ ರೈಲ್ವೆ ಸಿಬ್ಬಂದಿ ಎರಡು ಬ್ಯಾಗ್ ತೆರೆದು ನೋಡಿದಾಗ, ಬ್ಯಾಗ್ ನಲ್ಲಿ ಹಸಿ ಗಾಂಜಾ ಪತ್ತೆಯಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

About The Author