Thursday, November 21, 2024

Latest Posts

ಶಿವಮೊಗ್ಗ ಏರ್ ಪೋರ್ಟ್ ವಿಶೇಷತೆಗಳೇನು..?

- Advertisement -

shivamogga news

ಶಿವಮೊಗ್ಗ(ಫೆ.27): ಪ್ರಧಾನಿ ನರೇಂದ್ರ ಮೋದಿ ರಾಜ್ಯಪ್ರವಾಸವನ್ನು ಕೈಗೊಂಡಿದ್ದು, ಶಿವಮೊಗ್ಗದ ಬಹುನಿರೀಕ್ಷಿತ ಏರ್ ಪೋರ್ಟ್ ಗೆ ಚಾಲನೆ ನೀಡಿ, ಮಲೆನಾಡು ಜನರ ದಶಕಗಳ ಕನಸಿಗೆ ಇಂದು ಅದ್ಧೂರಿಯಾಗಿ ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣವಾಗಿ ಶಿವಮೊಗ್ಗ ಏರ್‌ಪೋರ್ಟ್‌ ಸೇರ್ಪಡೆಯಾಗಿದೆ.

ತಮ್ಮ ಊರಿನಲ್ಲಿ ಇಂತಹ ಒಂದು ಬೃಹತ್ ಏರ್ ಪೋರ್ಟ್ ಆಗ್ಬೇಕು ಅಂತ ಶಿವಮೊಗ್ಗದ ಜನ ವರ್ಷಗಳಿಂದಲೇ ಅನ್ಕೋತಿದ್ರು, ಇದೀಗ ಆ ಘಳಿಗೆ ಬಂದೊದಗಿದ್ದು, ವರ್ಷಗಳ ಕಾಮಗಾರಿ ಮುಗಿದು ಶಿವಮೊಗ್ಗದ ಸೋಗಾನೆಯಲ್ಲಿ ಕರ್ನಾಟಕದ ಅತಿ ದೊಡ್ಡ ಎರಡನೇ ವಿಮಾನ ನಿಲ್ದಾಣ ಆಗಿದೆ. ಮಲೆನಾಡಿನ ಜನರಿಗೆ ಇದು ಅತ್ಯಂತ ಸಂತಸದ ಕ್ಷಣವಾಗಿದೆ. ಇದರ ಜೊತೆ ವಿವಿಧ ಕಾಮಗಾರಿಗಳಿಗೂ ಮೋದಿ ಚಾಲನೆ ನೀಡಲಿದ್ದು, ಮಲೆನಾಡಿನಲ್ಲಿ ಅಭಿವೃದ್ಧಿ ಕೆಲಸಗಳಂತೂ ಭರ್ಜರಿಯಾಗಿ ಸಾಗ್ತಾ ಇದೆ.

ಇನ್ನು ಈ ಬೃಹತ್ ವಿಮಾನ ನಿಲ್ದಾಣ, ಶಿವಮೊಗ್ಗದ ನೂತನ ಏರ್‌ಪೋರ್ಟ್‌ನ್ನು ರೂ.450 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗಂಟೆಗೆ ಸುಮಾರು 300 ಪ್ರಯಾಣಿಕರನ್ನು ಅಲ್ಲಿನ ಸಿಬ್ಬಂದಿ ನಿಭಾಯಿಸುವಷ್ಟು ವಿಮಾನ ನಿಲ್ದಾಣದ ಪ್ಯಾಸೆಂಜರ್ ರ್ಟರ್ಮಿನಲ್ ಕಟ್ಟಡವು ಸುಸಜ್ಜಿತವಾಗಿದೆ. ಈ ವಿಮಾನ ನಿಲ್ದಾಣವು ಶಿವಮೊಗ್ಗ, ಮಲೆನಾಡಿನ ಇತರೆ ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಉಡಾನ್ ಯೋಜನೆ ಅಡಿ ಸೋಗಾನೆ ಗ್ರಾಮದ 662.38 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ವಿಮಾನ ನಿಲ್ದಾಣವು ಶಿವಮೊಗ್ಗ ನಗರದಿಂದ 8.8 ಕಿಲೋಮೀಟರ್ ದೂರವಿದ್ದು, ಭದ್ರಾವತಿಯಿಂದ ಸುಮಾರು 8.2 ಕಿಲೋಮೀಟರ್ ಅಂತರದಲ್ಲಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಅತಿ ಉದ್ದದ ರನ್ ವೇ ಹೊಂದಿರುವ ಈ ವಿಮಾನ ನಿಲ್ದಾಣದಲ್ಲಿ ಬೋಯಿಂಗ್ 737 ಮತ್ತು ಏರ್‌ಬಸ್ A320 ವಿಮಾನಗಳನ್ನು ಸುಲಭವಾಗಿ ಇಳಿಸಬಹುದು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ವಿಮಾನ ನಿಲ್ದಾಣದ ಕಾಮಗಾರಿಯು ಮತ್ತಷ್ಟು ವೇಗ ಪಡೆದುಕೊಂಡಿತ್ತು. ಮೊದಲಿಗೆ ಕೇವಲ 2050 ಮೀಟರ್ ರನ್ ವೇ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ದೊಡ್ಡ ಗಾತ್ರದ ವಿಮಾನವನ್ನು ಇಳಿಸಲು ಅನುಕೂಲವಾಗುವಂತೆ ರನ್ ವೇ ಉದ್ದವನ್ನು 3200 ಮೀಟರ್ ಗೆ ಹೆಚ್ಚಿಸಲು ಬಳಿಕ ತೀರ್ಮಾನಿಸಲಾಯಿತು. ಈ ವಿಮಾನ ನಿಲ್ದಾಣವನ್ನು ಶಿವಮೊಗ್ಗದ ಸುತ್ತಲಿನ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜನರು ಬಳಕೆ ಮಾಡಬಹುದಾಗಿದೆ.

ಶಿವಮೊಗ್ಗದಲ್ಲಿ ಏರ್ ಪೋರ್ಟ್ ಉದ್ಘಾಟನೆಗೆ ಮೋದಿ ಚಾಲನೆ..!

224 ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.? ಮತ್ತೆ ಅತಂತ್ರನಾ.? ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023

- Advertisement -

Latest Posts

Don't Miss