Monday, April 14, 2025

Latest Posts

ಬಿಲ್ ಗೇಟ್ಸ್ ಡೇಟಿಂಗ್ ರಹಸ್ಯ ಏನು ಗೊತ್ತಾ…?

- Advertisement -

ಬೆಂಗಳೂರು(ಫೆ.11):ಜಗತ್ತಿನ ಶ್ರೀಮಂತ ಉದ್ಯಮಿ ಮೈಕ್ರೋಸಾಫ್ಟ್ ಸಂಸ್ಥಾಪಕ, ಬಿಲ್ ಗೇಟ್ಸ್. ಇವರು 2021ರ ಆಗಸ್ಟ್​​ನಲ್ಲಿ ಪತ್ನಿ ಮೆಲಿಂಡಾ ಫ್ರೆಂಚ್​ ಗೇಟ್ಸ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಆ ಮೂಲಕ 27ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಇದೀಗ 67ನೇ ಇಳಿವಯಸ್ಸಿನಲ್ಲಿ ಮತ್ತೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ವೈರಲ್ ಆಗುತ್ತಿದೆ.

ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್ ಓಪನ್​ನ ಪುರುಷರ ಸಿಂಗಲ್ಸ್ ಪಂದ್ಯಾವಳಿ ಸಂದರ್ಭ ಬಿಲ್ ಗೇಟ್ಸ್ ಮತ್ತು ಪೌಲಾ ಹರ್ಡ್‌ ಜತೆಯಾಗಿ ಕಾಣಿಸಿಕೊಂಡಿದ್ದರು ವದಂತಿಗಳು ಹರಿದಾಡುತ್ತಿವೆ. ಒರಾಕಲ್‌ ಮಾಜಿ ಸಿಇಒ ಮಾರ್ಕ್‌ ಹರ್ಡ್‌ ಪತ್ನಿ ಪೌಲಾ ಹರ್ಡ್‌ ಜತೆ ಬಿಲ್ ಗೇಟ್ಸ್ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪೌಲಾ ಹರ್ಡ್‌ ಅವರು ಒರಾಕಲ್ ಸಿಇಒ ಮಾರ್ಕ್‌ ಹರ್ಡ್‌ ಅವರನ್ನು ಮದುವೆಯಾಗಿ 30 ವರ್ಷ ದಾಂಪತ್ಯ ಜೀವನ ನಡೆಸಿದ್ದರು. ಮಾರ್ಕ್‌ ಹರ್ಡ್‌ 2019ರಲ್ಲಿ ನಿಧನರಾಗಿದ್ದರು. ಅವರ ಪತ್ನಿ ಪೌಲಾ ಹರ್ಡ್​ಗೆ ಈಗ 60 ವರ್ಷ ವಯಸ್ಸು. ವ್ಯಾಲಂಟೈನ್​​ ಡೇ  ಸಮೀಪಿಸುತ್ತಿರುವ ಸಂದರ್ಭದಲ್ಲೇ ಬಿಲ್ ಗೇಟ್ಸ್ ಮತ್ತು ಪೌಲಾ ಹರ್ಡ್‌ ನಡುವಣ ಡೇಟಿಂಗ್ ವಿಚಾರ ಬಹಿರಂಗವಾಗಿದ್ದು, ಪೌಲಾ ಹರ್ಡ್‌ ಮತ್ತು ಮಾರ್ಕ್ ಹರ್ಡ್ ದಂಪರಿಗೆ ಇಬ್ಬರು ಮಕ್ಕಳಿದ್ದಾರೆ. ಮೆಲಿಂಡಾ ಅವರ ಜತೆಗಿನ ದಾಂಪತ್ಯ ಜೀವನದಲ್ಲಿ ಬಿಲ್ ಗೇಟ್ಸ್ ಮೂವರು ಮಕ್ಕಳನ್ನು ಹೊಂದಿದ್ದರು.

- Advertisement -

Latest Posts

Don't Miss