Wednesday, July 16, 2025

Latest Posts

ಶಾರುಕ್ ಮಗನ ಸಮಸ್ಯೆಗೆ ನಾನೇನು ಮಾಡಲಿ ; ಅಜಯ್ ದೇವಗನ್ ಪ್ರತಿಕ್ರಿಯೆ

- Advertisement -

www.karnatakatv.net: ಬಾಲಿಹುಡ್‌ನ ಹೆಸರಾಂತ ನಟ ಶಾರುಕ್‌ಖಾನ್ ಮಗ ಆರ್ಯನ್ ಖಾನ್ ಇತ್ತೀಚೆಗೆ ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ವಿಚಾರಕ್ಕೆ ಸಂಭoದಿಸಿದoತೆ ಬಾಲಿಹುಡ್ ನ ಇನ್ನೊಬ್ಬ ನಟ ಅಜಯ್ ದೇವಗನ್ ಶಾರುಕ್‌ಖಾನ್ ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ಅವರು ಪಾನ್ ಮಸಾಲಾ ಜಾಹಿರಾತಿನಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಈ ಜಾಹಿರಾತಿನ ಹೊಸ ಆವೃತ್ತಿಗೆ ಸಂಭoದಿಸಿದoತೆ ಶಾರುಕ್ ಮಗನ ಚಿಂತೆಯಿoದ ಚಕ್ಕರ್ ಹಾಕಿದ್ದಾರೆ, ಇದಕ್ಕೆ ಸಂಭoದಿಸಿದoತೆ ಅಜಯ್ ದೇವಗನ್ ಖಡಕ್ ಟಾಂಗ್ ನೀಡಿದ್ದಾರೆ ಎನ್ನಲಾಗಿದೆ .

ಎಲ್ಲರಿಗೂ ತಿಳಿದಿರುವಂತೆ ಶಾರುಕ್ ಈಗ ತುಂಬಾ ಸಂಕಷ್ಟದಲ್ಲಿದ್ದಾರೆ, ಆರ್ಯನ್ ಅರೆಷ್ಟ್ ಆದ ದಿನದಿಂದಲೂ ಅವರು ಯೊಚನೆಯಲ್ಲಿ ಮುಳುಗಿದ್ದಾರೆ. ಅವರ ದಿನಚರಿ ಎಲ್ಲ ಬದಲಾಗಿದೆ. ಯಾವುದೇ ಸಿನಿಮಾ ಶೂಟಿಂಗ್ ನಲ್ಲೂ ಸಹ ಭಾಗಿಯಾಗಿಲ್ಲ ಇದರಿಂದ ಬಂಡವಾಳ ಹೂಡಿರುವ ನಿರ್ಮಾಪಕರ ಲೆಕ್ಕಾಚಾರ ಅಸ್ತವ್ಯಸ್ಥವಾಗಿದೆ. ಸಿನೆಮಾ ಜೊತೆಗೆ ಹಲವಾರು ಜಾಹಿರಾತುಗಳಲ್ಲಿ ಶಾರುಕ್ ಅಭಿನಯಿಸಲು ಒಪ್ಪಂದ ಮಾಡಿಕೊಂಡಿದ್ದಾರೆ. ಇವುಗಳ ಶೂಟಿಂಗ್ ಸಹ ಆಗುತ್ತಿಲ್ಲ, ಇದಕ್ಕೆ ಸಂಭoದಿಸಿದoತೆ ಅಜಯ್ ದೇವಗನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

ಈ ವಿಚಾರ ಕುರಿತು ನಟ ಕಮಾಲ್ ಖಾನ್ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ಇನ್ನೂ ಶಾರುಖ್ ಮತ್ತು ದೇವಗನ್ ಪಾನ್ ಮಸಾಲ ಜಾಹಿರಾತಿನ ಹೊಸ ಆವೃತ್ತಿಯ ಶೂಟಿಂಗ್ ಗೆ ಚಕ್ಕರ್ ಹಾಕಿದ್ದಾರೆ. ಆದರೆ ಅಜಯ್ ದೇವಗನ್ ರವರು ಚಕ್ಕರ್ ಹಾಕಿಲ್ಲ ಮತ್ತು ಶೂಟಿಂಗ್ ದಿನಾಂಕವನ್ನು ಸಹ ಮುಂದಕ್ಕೆ ಹಾಕಲು ಒಪ್ಪಿಕೊಂಡಿಲ್ಲವoತೆ.

ನಿರ್ಮಾಪಪಕರಿಗೆ ಈ ವಿಚಾರ ಕುರಿತಂತೆ ಹೇಳಿರುವ ಅಜಯ್ ದೇವಗನ್ ” ಶಾರುಕ್ ಮಗನ ಸಮಸ್ಯೆಗೂ ನನಗು ಯಾವುದೇ ಸಂಭoದವಿಲ್ಲ . ಇದು ಶಾರುಕ್‌ಖಾನ್ ಅವರ ಪರ್ಸನಲ್ ಸಮಸ್ಯೆ , ಆ ಕಾರಣದಿಂದ ನಾನು ನನ್ನ ಶೂಟಿಂಗ್ ಮಾಡಿಕೊಂಡು ಬೇರೆ ಡೇಟ್ಸ್ ನೀಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಮಲ್ ಖಾನ್ ಬಾಲಿವುಡ್ ಮಂದಿಯ ಒಗ್ಗಟ್ಟು ಹೀಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ .

ಸಂಪತ್ ಶೈವ, ನ್ಯೂಸ್ ಡೆಸ್ಕ್- ಕರ್ನಾಟಕ ಟಿವಿ

- Advertisement -

Latest Posts

Don't Miss