ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದ ಮತ ಎಣಿಕೆ ನಡೀತಾಯಿದೆ. ಈ ಹಿನ್ನೆಲೆಯಲ್ಲಿ ಜತೆಗೆ ದೇಶದಾದ್ಯಂತ ರಾಜಕೀಯ ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲಿ ಜಿಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಬಿಹಾರ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೂರು ದಿನಗಳ ಹಿಂದೆಯೇ ಹೊರಬಿದ್ದ ಚುನಾವಣಾ ಸಮೀಕ್ಷೆಗಳು ಎನ್‌ಡಿಎ ಭರ್ಜರಿ ಮುನ್ನಡೆಯನ್ನು ಸೂಚಿಸಿತ್ತು. ಬಹುತೇಕ ಎಲ್ಲಾ ಸಮೀಕ್ಷೆಗಳೂ ಒಂದೇ ಸಂದೇಶವನ್ನು ನೀಡಿದ್ದವು. ಎನ್‌ಡಿಎ ಸರ್ಕಾರ ಮರಳುತ್ತದೆ ಎಂಬ ವಿಶ್ವಾಸ ಜನರಲ್ಲಿ ಸ್ಪಷ್ಟವಾಗಿತ್ತು.
ಎನ್‌ಡಿಎ ಮಿತ್ರಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಮೇಲಿನ ನಂಬಿಕೆ, ಜೊತೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸ್ಥಳೀಯ ನಾಯಕತ್ವ, ಹಾಗೂ ಚಿರಾಗ್ ಪಾಶ್ವಾನ್ ಮತ್ತು ಬಿಹಾರದ ಬಿಜೆಪಿ ನಾಯಕರ ಸಂಘಟನಾ ಸಾಮರ್ಥ್ಯ ಇವೆಲ್ಲವೂ ಈ ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ಎನ್‌ಡಿಎ ವಿರುದ್ಧವಾಗಿದ್ದ ಎಲ್ಲಾ ರಾಜಕೀಯ ಅಂದಾಜುಗಳನ್ನು ತಿರಸ್ಕರಿಸಿ, ಬಿಜೆಪಿ ನಾಯಕರುಗಳ ಕಾರ್ಯವೈಖರಿ ಇವತ್ತಿನ ಚುನಾವಣಾ ಫಲಿತಾಂಶಕ್ಕೆ ಅವರ ಶ್ರಮ ಏನು ಅನ್ನೋದು ಸಾಭೀತಾಗಿದೆ. ಅಂತ HD ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ




