Sunday, September 8, 2024

Latest Posts

ಡಿ ಬಾಸ್ ಜೊತೆ 15 ವರ್ಷದ ಹಿಂದೆ ನಟಿಸಿದ್ದ ನಟಿ ಏನ್ ಮಾಡಿದ್ರು..?

- Advertisement -

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಶಾಸ್ತ್ರಿ ಚಿತ್ರದ ಹಾಡೊಂದನ್ನ ಇದೀಗ ಟಾಲಿವುಡ್ ನಟಿ ಮಾನ್ಯ ನಾಯ್ಡು ಹಾಡಿದ್ದಾರೆ.. ಆ ವೀಡಿಯೋವನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.. 2005ರ ಜೂನ್ 10ಕ್ಕೆ ಶಾಸ್ತ್ರಿ ಸಿನಿಮಾ ತೆರೆಕಂಡಿತ್ತು.. ಈ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಸ್ವತಃ ಮಾನ್ಯ ಅವರೇ ನಟಿಸಿದ್ರು.. ಅದರ ನೆನಪಿನಲ್ಲೇ ಈಗ ಆ ಚಿತ್ರದ  ಓ ಹೃದಯ, ಓ ಹೃದಯ ಹಾಡನ್ನ ಹಾಡಿದ್ದಾರೆ.. ಸದ್ಯ ವಿದೇಶದಲ್ಲಿ ನೆಲೆಸಿರುವ ಮಾನ್ಯ ಅವರು ತೆಲುಗು ಸಿನಿಮಾಗಳ ಜೊತೆಗೆ ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ..ಮಾನ್ಯ ನಟನೆಯ ಮೊದಲ ಕನ್ನಡ ಸಿನಿಮಾ ವರ್ಷ.. ಈ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಅವರ  ಜೋಡಿಯಾಗಿ ಮಾನ್ಯ ನಟಿಸಿದ್ರು.. ವರ್ಷ ಚಿತ್ರದ ವಾಸಂತಿ ವಾಸಂತಿ.. ಹಾಡನ್ನ ಮಾನ್ಯ ತಮ್ಮ ಮಗಳೊಂದಿಗೆ ಹಾಡಿದ್ದು, ಇತ್ತೀಚೆಗೆ ಆ ವೀಡಿಯೋವನ್ನೂ ಸಹ ಶೇರ್ ಮಾಡಿದ್ರು..

ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss